ರಾಣೆಬೆನ್ನೂರ

ಹರಿದ್ವಾರ ಪತಂಜಲಿ ಕೇಂದ್ರದಲ್ಲಿ ನವರಾತ್ರಿ ಯಾಗ: ಪ್ರತಿಭೆ ಮೇರೆದ ಸಾಧಕೀಯರು.

ಹರಿದ್ವಾರ ಪತಂಜಲಿ ಕೇಂದ್ರದಲ್ಲಿ ನವರಾತ್ರಿ ಯಾಗ: ಪ್ರತಿಭೆ ಮೇರೆದ ಸಾಧಕೀಯರು.


ರಾಣೇಬೆನ್ನೂರು 15 : ಉತ್ತರ ಭಾರತದ ಹರಿದ್ವಾರದ ಬಾಬಾ ರಾಮದೇವಜೀ ಅವರ ಪತಂಜಲಿ ಕೇಂದ್ರದಲ್ಲಿ ನವರಾತ್ರಿಯ ಬೃಹತ್ ಯಾಗ ಧಾರ್ಮಿಕ ಕಾರ್ಯಕ್ರಮವು ಜಾಲ ತಾಣದ ಮೂಲಕ ಇತ್ತಿಚೀಗೆ ನಡೆಯಿತು. ಯಾಗ ಕಾರ್ಯಕ್ರಮದಲ್ಲಿ 5 ರಾಜ್ಯಗಳ ಪತಂಜಲಿ ಮಹಿಳಾತಂಡಗಳು ಭಾಗವಹಿಸಿದ್ದರು. ಯಾಗದ ನಿಮಿತ್ತ  ದೇವಿಯ ಮೂಲ ಮಂತ್ರ ದಿವ್ಯಯಜ್ಞ ಅನುಷ್ಠಾನದಲ್ಲಿ ಉತ್ತರ ಕರ್ನಾಟಕದ ಮಹಿಳಾ ರಾಜ್ಯಪ್ರಭಾರಿ ಶ್ರೀಮತಿ ಆರತಿ ಕಾನಗೂ ಹಾಗೂ ್ತ ಹಾವೇರಿ ಜಿಲ್ಲೆ ಮಹಿಳಾ ಪ್ರಭಾರಿ ಜೋತಿ ಜಂಬಗಿ ನೇತ್ರತ್ವದ ತಂಡವು ಪ್ರತಿನಿಧಿಸಿದ್ದರು. ನಡೆದ ದಾರ್ಮಿಕ ಕಾರ್ಯಕ್ರಮದಲ್ಲಿ  ಪತಂಜಲಿ ಯೋಗ ಕೇಂದ್ರದ ಯೋಗ ಸಾದಕಿಯರಾದ ಮಂಡಲಪ್ರಭಾರಿ  ವಜ್ರೇಶ್ವರಿ ಲದ್ವಾ, ರೇಖಾ ರಮಾಳದ, ಕವಿತಾ ಕುಬಸದ, ಮಹೇಶ್ವರಿ ಕುಬಸದ, ಪಾರ್ವತಿ ಹುಲಿಹಳ್ಳಿ, ಹೇಮಾ ತಾಳೂರ, ಶೋಭಾ ಗುಡಮಿ, ಲಲಿತಾ ಮೇಲಗಿರಿ, ಶಶಿಕಲಾ ಬಡೆಂಕಲ್ ಸೇರಿದಂತೆ ಸಮಿತಿಯ ಮತ್ತಿತರ ಸಾದಕಿಯರು ಪಾಲ್ಗೂಂಡಿದ್ದರು. 

\

ಸುದ್ದಿ ಓದಿ