ಹೊಸಪೇಟೆ

ರಾಷ್ಟ್ರಮಟ್ಟದ ಬೆಳಕು ಸಂಭ್ರಮ

ರಾಷ್ಟ್ರಮಟ್ಟದ ಬೆಳಕು ಸಂಭ್ರಮ

ವಿಜಯನಗರ 01: ಜಿಲ್ಲೆಯಲ್ಲಿ ನಡೆದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಬೆಳಕು ಸಂಸ್ಥೆ ವತಿಯಿಂದ ಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕೆ.ಶ್ಯಾಮ್‌ಸುಂದರ್ ಅವರಿಗೆ ರಾಷ್ಟ್ರಮಟ್ಟದ ಶ್ರೀಕೃಷ್ಣದೇವರಾಯ ಪ್ರಶಸ್ತಿ ನೀಡಿ ಗೌರವಿಸಿದರು. ಮಹಿಳಾ ಘಟಕದ ರಾಜ್ಯಾಧ್ಯಕ್ಷರು ಹಾಗೂ ಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಶ್ರೀಲತಾ.ಜೆ.ಎಸ್‌. ಅವರಿಗೆ ರಾಷ್ಟ್ರಮಟ್ಟದ ಶ್ರೀಕೃಷ್ಣದೇವರಾಯ ಪ್ರಶಸ್ತಿ ನೀಡಿ ಗೌರವಿಸಿದರು.  

ರಾಷ್ಟ್ರೀಯ ಕರಾಟೆ ಚಾಂಪಿಯನ್ ಆದ ಗುರುಪ್ರಸಾದ್‌.ಜೆ.ಎಸ್‌. ಅವರಿಗೆ ರಾಷ್ಟ್ರಮಟ್ಟದ ಸಾಹಸ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು ಡ್ಯಾನ್ಸರ್ ಹಾಗೂ ಕೋರಿಯಾಗ್ರಾಫರ್ ಹರಿಪ್ರಸಾದ್‌ಜೆ.ಎಸ್‌. ಅವರಿಗೆ ರಾಷ್ಟ್ರಮಟ್ಟದ ಅತ್ಯಂತ ಕಾಯಕ ರತ್ನಪ್ರಶಸ್ತಿ ನೀಡಿ ಗೌರವಿಸಿದರು ಅತ್ಯಂತ ಗೌರವದಿಂದ ಸನ್ಮಾನ ಗೌರವಗಳು ನೀಡಿ ಕರ್ನಾಟಕದ ನಾಡು ನುಡಿಗೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಾವು ಸಲ್ಲಿಸುತ್ತಿರುವ ಹಾಗೂ ಸಲ್ಲಿಸಿರುವ ತಮ್ಮ ಅನುಪಮ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಂಸ್ಕೃತಿಕ ಟ್ರಸ್ಟ್‌ ವತಿಯಿಂದ ಹೊಸಪೇಟೆಯಲ್ಲಿ ನಡೆದಿರುವ ರಾಷ್ಟ್ರಮಟ್ಟದ ಬೆಳಕು ಸಂಭ್ರಮದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. 


ಸುದ್ದಿ ಓದಿ