ಸಿಂಧಗಿ

ಅಪ್ರತಿಮ ಚೈತನ್ಯದ ಮೂರ್ತಿ ಸ್ವಾಮಿವಿವೇಕಾನಂದರು: ಕಿಣಗಿ

ಅಪ್ರತಿಮ ಚೈತನ್ಯದ ಮೂರ್ತಿ ಸ್ವಾಮಿವಿವೇಕಾನಂದರು: ಕಿಣಗಿ

ಸಿಂದಗಿ 13: ಭಾರತದ ಪರಂಪರೆ, ಸಾಂಸ್ಕೃತಿಯನ್ನು ಜಗತ್ತಿಗೆ ತೋರಿಸಿ ತೋರಿಸಿದ ಅಪ್ರತಿಮ ಚೈತನ್ಯದ ಮೂರ್ತಿ ಸ್ವಾಮಿವಿವೇಕಾನಂದರು ಎಂದು ಎಚ್‌.ಜಿ. ಪಪೂ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು. 

ಪಟ್ಟಣದ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತ್ತು ವಿ.ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಯುವ ದಿನಾಚಾರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಯುವಜನಾಂಗಕ್ಕೆ ಪ್ರಸ್ತುತ ದಿನದಲ್ಲಿ ಉತ್ತಮ ಮಾರ್ಗದರ್ಶನ ಅತ್ಯವಶ್ಯವಾಗಿದೆ. ಶಿಕ್ಷಣದ ಅನೇಕ ಪ್ರಕ್ರಿಯೆಗಳು ಬದಲಾಗಬೇಕು. ಬದುಕುವ ಶಿಕ್ಷಣ ಇಂದು ಅತ್ಯವಶ್ಯವಾಗಿದೆ. ಆ ನಿಟ್ಟಿನಲ್ಲಿ ಸಮಾಜ, ಶಾಲೆ ಮತ್ತು ಕುಟುಂಬಗಳ ಪಾತ್ರ ಹಿರಿಯದಾಗಿದೆ ಎಂದರು. 

ಈ ಸಂದರ್ಭದಲ್ಲಿ ಪ್ರಾಚಾರ್ಯ ಪ್ರೊ.ಡಿ.ಎಮ್‌. ಪಾಟೀಲ ಮಾತನಾಡಿ, ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳು ಇಂದು ಕುಸಿಯುತ್ತಿವೆ. ಅವುಗಳ ಬೆಳವಣಿಗೆ ಯಾದರೆ ಈ ದೇಶದ ಬೆಳವಣಿಗೆ ಯಾಗುತ್ತದೆ ಎಂದರು. ಪ್ರಾಧ್ಯಾಪಕರಾದ ಡಾ.ಎಸ್‌.ಆಯ್‌. ಬಂಡಾರಿ, ಪ್ರೊ.ಡಿ.ಎಮ್‌. ಶರಶೆಟ್ಟಿ, ಪ್ರೊ. ರವಿ ಗೋಲಾ, ಡಾ.ಪ್ರಕಾಶ ರಾಠೋಡ ಅವರು ವೇದಿಕೆ ಮೇಲೆ ಇದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ