ಬೆಳಗಾವಿ

ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ

ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ

ಯಮಕನಮರಡಿ 26: ಸ್ಥಳೀಯ ಎಸ್‌.ಆರ್‌.ಎಮ್‌.ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್‌.ಎ.ಮಲಗೌಡನವರ ರವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್‌.ರಾಮನಕಟ್ಟಿ ವಹಿಸಿದ್ದರು.  

ಎನ್‌.ಎಸ್‌.ಎಸ್‌.ಕಾರ್ಯಕ್ರಮ  ಅಧಿಕಾರಿ ಬಿ.ಬಿ.ಕೊಡ್ಲಿ ಕಾರ್ಯಕ್ರಮದ ನಿಮಿತ್ಯ ಸ್ವಯಂ ಸೇವಕರನ್ನು ಉದ್ದೇಶಿಸಿ ಎನ್‌.ಎನ್‌.ಎಸ್‌.  ಹಿನ್ನೆಲೆ ದ್ಯೇಯೋದ್ದೇಶಗಳು ಹಾಗೂ ಯುವಕರ ಪಾತ್ರ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಹ ಕಾರ್ಯಕ್ರಮ ಅಧಿಕಾರಿ ಎಸ್‌.ಆರ್‌. ತಬರಿ ನಿರ್ವಹಿಸಿದರು.  ಕಾರ್ಯಕ್ರಮದ ಕೊನೆಯಲ್ಲಿ ಸ್ವಯಂಸೇವಕರಿಗೆ ಎನ್‌.ಎಸ್‌.ಎಸ್‌.ಪ್ರತಿಜ್ಞೆ ಬೋಧಿಸಲಾಯಿತು. 


ಸುದ್ದಿ ಓದಿ