ರಾಷ್ಟ್ರೀಯ ಗ್ರಂಥಾಲಯ ದಿನ ಆಚರಣೆ
ಸಿಂದಗಿ 13: ಪಟ್ಟಣದ ಟಿ.ಎಸ್.ಪಿ ಮಂಡಳಿ ಸಂಸ್ಥೆಯ ಸಿ.ಎಮ್.ಮನಗೂಳಿ ಕಲಾ, ವಿಜ್ಷಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ.ಎಸ್.ಆರ್.ರಂಗನಾಥ ರವರ ಸ್ಮರಣಾರ್ಥ ಅಂಗವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಂಥಾಲಯ, ಗ್ರಂಥಾಲಯದ ಉಪಯೋಗ, ಗ್ರಂಥಾಲಯ ಹೇಗಿರಬೇಕು ಎಂಬ ಹಲವಾರು ವಿಚಾರಗಳ ಬಗ್ಗೆ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಸದುಪಯೋಗ ಮಾಡಿಕೊಳ್ಳಬೇಕು, ಸ್ಪರ್ಧಾತ್ಮಕ ಪರೀಕ್ಚೆಗಳಿಗೆ ಪೂರಕವಾಗುವ ಪುಸ್ತಕಗಳು ದಿನಪತ್ರಿಕೆಗಳು ಅಧ್ಯಾಯನ ಮಾಡಬೇಕೆಂದು ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ವಹಿಸಿದ ವಿಶ್ರಾಂತ ಗ್ರಂಥಪಾಲಕರಾದ ಎಸ್.ಎಮ್.ಕುಂಬಾರ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಸಾಧೆನೆಗೆ ಅಧ್ಯಯನ ಅತಿಅವಶ್ಯವಾಗಿದೆ ಗ್ರಂಥಾಲಯದಲ್ಲಿ ಕನಿಷ್ಠ 6.00 ಘಂಟೆ ವಿಧ್ಯಾರ್ಥಿಗಳು ಬಿಡುವಿನ ವೇಳೇಯಲ್ಲಿ ಗ್ರಂಥಾಲಯ ಸದುಪಯೋಗ ಮಡೆದುಕೊಳ್ಳಬೇಕೆಂದು ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ.ಬಿ.ಜಿ.ಪಾಟೀಲ ರವರು ಹೇಳಿದರು.
ಗ್ರಂಥಪಾಲಕರಾದ ಸತೀಶ ಬಿರಾದಾರ ರವರು ಸ್ವಾಗತಿಸಿದರು, ಡಾ.ಅಂಬರೀಶ ಬಿರಾದಾರ ರವರು ನಿರೂಪಿಸಿದರು, ಕಾರ್ಯಕ್ರಮದಲ್ಲಿ ಡಾ. ಎ.ಎಮ್.ಮನಗೂಳಿ ಪ್ರೊ.ಎಸ್.ಎಮ್.ಬಿರಾದಾರ, ಪ್ರೊ.ಎಸ್.ಕೆ.ಹೂಗಾರ, ಡಾ.ಆರತಿ ಅರಳಗುಂಡಗಿ, ಜ್ಯೋತಿ ಹಿಟ್ನಳ್ಳಿ, ಗೀತಾ ಮುರುಗಾನೂರ, ಸುಧಾ ಮಹಿಶಾಳೆ, ಜಿ.ಎಸ್. ಬಡಿಗೇರ ಜೆ.ಸ್.ಹಿಟ್ನಳ್ಳಿ, ಮಾಂತೇಶ ಸುಂಗಠಾಣ, ರಮೇಶ ಯಂಕಂಚಿಕರ, ವ್ಹಿ.ಬಿ.ಪಾಟೀಲ, ಎಸ್,ವೈ.ನಾಯ್ಕೋಡಿ, ಗುರುಲಿಂಗಪ್ಪ, ಎಸ್.ಎಮ್.ಅರ್ಜುಣಗಿ,ಎಸ್.ಎಮ್.ಇಂಗಳೆ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.