ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ
ಲೋಕದರ್ಶನ ವರದಿ
ಕುಷ್ಟಗಿ: ತಾಲೂಕಿನ ಚಳಗೇರಾ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಚಳಗೇರಾದಲ್ಲಿ ‘ರಾಷ್ಟ್ರೀಯ ಕುಷ್ಠರೋಗ’ ನಿರ್ಮೂಲನಾ ಕಾರ್ಯಕ್ರಮ ಹಾಗೂ ‘ವಿಶ್ವ ಕ್ಯಾನ್ಸರ್’ ದಿನಾಚರಣೆ ಯಶಸ್ವಿಯಾಗಿ ಜರುಗಿತು. ಜಿಲ್ಲಾ ಆರೋಗ್ಯ, ಮತ್ತು ಕುಟುಂಬ ಕಲ್ಯಾಣ ಸಂಘ, ಕುಷ್ಟರೋಗ ವಿಭಾಗ, ಕೊಪ್ಪಳ ಪೂರ್ಣಚಂದ್ರ ತೇಜಸ್ವಿ, ಇಕೋ ಕ್ಲಬ್, ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕುಷ್ಟರೋಗ ಕುರಿತು ಉಪ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿ, ವಾಯ್, ಹೆಚ್, ಈ, ಓ.) ಶ್ರೀಕಾಂತ್ ಹೆಚ್ ಹೆಚ್, ಮಾತನಾಡಿ 2025 ರೊಳಗೆ ಕುಷ್ಟರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಈ ಕುರಿತು ತಿಳಿದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ರೋಗ ಲಕ್ಷಣ ಕಂಡು ಬಂದಲ್ಲಿ ಸ್ಥಳೀಯ ಆರೋಗ್ಯ ಇಲಾಖೆಯಿಂದ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು. ಸ್ಥಳೀಯ ಪಿ,ಹೆಚ್, ಈ. ಕೇಂದ್ರದ ಹೆಚ್, ಐ,ಓ. ಸಂಗಮೇಶ ಅಂಗಡಿ ಸಿಹೆಚ್ಓ ಸಾವಿತ್ರಿ ಹಿರೇಮಠ ಆಶಾ-ಕಾರ್ಯಕರ್ತೆ ಕಾಳಮ್ಮ, ಭಾಗ್ಯಮ್ಮ ಸಮಾರಂಭದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾ ರಾಯಪ್ಪ ಹೂಗಾರ, ವಿಶಾಲಾಕ್ಷಮ್ಮ, ಅರವಿಂದಕುಮಾರ ದೇಸಾಯಿ, ಶಾಕೀರ್ ಬಾಬಾ, ಬಸವರಾಜ ಪಿ, ಶರಣಪ್ಪ ಪರಸಾಪುರ, ಸಿದ್ದನಗೌಡ ಪೊಲೀಸ್ ಪಾಟೀಲ್, ಯಂಕವ್ವ, ಶರೀಫಾ-ಬೀ ಇಕೋ ಕ್ಲಬ್” ಸಂಚಾಲಕ ಶರಣಪ್ಪ ಪರಸಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದನಗೌಡ ಪೊಲೀಸ್ ಪಾಟೀಲ್ ಸ್ವಾಗತಿಸಿದರು. ಅರವಿಂದಕುಮಾರ ದೇಸಾಯಿ ನಿರೂಪಿಸಿದರು.. ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್, ವೀರೇಶ್ ಹಾದಿಮನಿ, ಪೂರ್ಣಿಮಾ ಅರಹುಣಸಿ ಇದ್ದರು.