ರಾಣೆಬೆನ್ನೂರ

ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟ : ನಿಟ್ಟೂರ್ ಸೆಂಟ್ರಲ್ ಶಾಲೆಗೆ ಪ್ರಥಮ ಸ್ಥಾನ

ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟ : ನಿಟ್ಟೂರ್ ಸೆಂಟ್ರಲ್ ಶಾಲೆಗೆ ಪ್ರಥಮ ಸ್ಥಾನ

ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟ : ನಿಟ್ಟೂರ್ ಸೆಂಟ್ರಲ್ ಶಾಲೆಗೆ ಪ್ರಥಮ ಸ್ಥಾನ  

ರಾಣೇಬೆನ್ನೂರು  25: ಹರಿಯಾಣದ ದತ್ತೂರಿನಲ್ಲಿ  ಸಿಬಿಎಸ್‌ಇ ಕಬಡ್ಡಿ ರಾಷ್ಟ್ರೀಯ ಕ್ರೀಡಾಕೂಟವು ಇತ್ತೀಚೆಗೆ  ನಡೆಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಅಪ್ರತಿಮ ಸಾಧನೆ ಮೇರೆದ ರಾಣೇಬೆನ್ನೂರಿನ ಪ್ರತಿಷ್ಠಿತ ನಿಟ್ಟೂರ್ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿ ಕ್ರೀಡಾಪಟುಗಳು ಉತ್ತರ ಪ್ರದೇಶದ ತಂಡವನ್ನು ಸೋಲಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿ ಸಾಧನೆ ಪಡೆದು ನಾಡಿಗೆ ಜಿಲ್ಲೆಗೆ ಮತ್ತು ತಾಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.  

             ಕಬಡ್ಡಿ ಕ್ರೀಡಾಕೂಟದಲ್ಲಿ ಶಾಲೆಯ ಕ್ರೀಡಾಪಟುಗಳಾದ ಶ್ರೇಷ್ಠ ಟಿ, ಗೌತಮಿ ಎಸ್‌.ಗುರ​‍್ಪನವರ, ಚಿಂತನಾ ಎಸ್ ಮರಿಲಿಂಗಣ್ಣನವರ, ನವ್ಯಾ ಮೇಡ್ಲೆರಿ, ಸುಮತಿ ಅಜ್ಜನವರ, ಪಿರಾಂಬಿ  ಕಿಲ್ಲೇದಾರ, ಭೂಮಿಕಾ ಕುಸಗೂರ, ಕೃತಜ್ಞ ಗಾಳೇರ, ಚಿನ್ಮಯಿ ಮರಿಗೌಡರ, ಮದಿಹಾ ಕಳ್ಳಾಳ್, ಭೂಮಿಕಾ ಕುಲಕರ್ಣಿ ಮತ್ತಿತರರು ಭಾಗವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಿಗೆ ಕಬಡ್ಡಿ ತಂಡದ ತರಬೇತುದಾರ, ದೈಹಿಕ ಶಿಕ್ಷಕ ಪ್ರವೀಣ್ ಎಸ್‌. ಮ್ಯಾಗಳರ, ದೀಪಾ ಪಾಟೀಲ್, ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ನಿಟ್ಟೂರ, ಆಡಳಿತಾಧಿಕಾರಿ ರವಿ ಹಿರೇಮಠ, ಪ್ರಾಚಾರ್ಯ ಲತಾ ನಿಟ್ಟೂರ, ಉಪ ಪ್ರಾಚಾರ್ಯ ಅಂಜಲಿ ಹರಪನಹಳ್ಳಿ, ಲಕ್ಷ್ಮೀ ನಾಯಕ, ಸೇರಿದಂತೆ ಶಾಲೆಯ ಎಲ್ಲಾ, ಶಿಕ್ಷಕರು ಹಾರ್ದಿಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ