ರಾಷ್ಟ್ರೀಯ

ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ ವೇದಿಕೆಗೆ ಪ್ರಧಾನಿ ಚಾಲನೆ

ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ ವೇದಿಕೆಗೆ ಪ್ರಧಾನಿ ಚಾಲನೆ

ನವದೆಹಲಿ,  ಆಗಸ್ಟ್ 13: ದೇಶಕ್ಕೆ  ಸ್ವಾತಂತ್ರ್ಯ ದಿನಾಚರಣೆಯ  ಕೊಡುಗೆಯಾಗಿ "ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ" ಎಂಬ ಹೊಸ ವೇದಿಕೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ   ಚಾಲನೆ ನೀಡಿದರು

ಪ್ರಾಮಾಣಿಕವಾಗಿ ತೆರಿಗೆ ಪಾವತಿಗೆ ಒತ್ತು ನೀಡಲು ಕೇಂದ್ರ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ʼಪಾರದರ್ಶಕ ತೆರಿಗೆʼ ಎನ್ನುವ ವೇದಿಕೆ ಇದಾಗಿದೆ. ಇದರ ಮೂಲಕ ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವ ಯಾತ್ರೆ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಾಮಾಣಿಕ ತೆರಿಗೆ ಪಾವತಿಗೆ ಒತ್ತು ನೀಡಲು ಸಂಬಂಧ ಈ ವೇದಿಕೆ ಸೃಷ್ಟಿಸಲಾಗಿದ್ದು  ವಿಡಿಯೋ ಕಾನ್ಫಿರೆನ್ಸ್ ಮೂಲಕ ಈ ವೇದಿಕೆಗೆ ಚಾಲನೆ ನೀಡಲಾಗಿದೆ. 

ದೇಶದಲ್ಲಿ ನಡೆಯುತ್ತಿರುವ ಸುಧಾರಣೆ ಹೊಸ ಹಂತ ತಲುಪಿದೆ. ದೇಶದಲ್ಲಿ ಹಲವಾರು ದೇಶದಲ್ಲಿ ಹಲವಾರು ಮಹತ್ವದ ಬದಲಾವಣೆಗಳಾಗುತ್ತಿದ್ದು, ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡಲು ಹೊಸ ವೇದಿಕೆಯನ್ನ ಸೃಷ್ಟಿಸಲಾಗಿದೆ. ಇನ್ನು ಇಂದಿನಿಂದ ತೆರಿಗೆ ನೀತಿಯಲ್ಲಿ ಹೊಸ ಯಾತ್ರೆ ಆರಂಭವಾಗಲಿದೆ ಎಂದಿದ್ದಾರೆ.

ಪ್ರಾಮಾಣಿಕ ತೆರಿಗೆದಾರರು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಅಸಲಿಗೆ ಪ್ರಾಮಾಣಿಕ ತೆರಿಗೆಗಾರರಿಂದ ದೇಶವೂ ಮುನ್ನೆಡೆಯುತ್ತಿದೆ.  ಪ್ರಾಮಾಣಿಕವಾಗಿ ತೆರಿಗೆ ಪಾವತಿ ಎಲ್ಲ ನಾಗಾರಿಕರ ಕರ್ತವ್ಯ. ಹಾಗಾಗಿ ಪ್ರಾಮಾಣಿಕ ತೆರಿಗೆದಾರರ ಸಹಕಾರಕ್ಕೆ ಹೊಸದೊಂದು ಪ್ಲಾಟ್ಪಾರ್ಮ್ ನೀಡಿದ್ದು, ಪ್ರಾಮಾಣಿಕ ತೆರಿಗೆದಾರರ ಗೌರವಿಸುವ ಯಾತ್ರೆ ಆರಂಭವಾಗಿದೆ ಎಂದಿದ್ದಾರೆ. 

ಅಲ್ಲದೇ ತೆರಿಗೆ ವಂಚನೆಯಿಂದ ನೀವು ಕೇವಲ ದೇಶಕ್ಕೆ ಮಾತ್ರ ಮೋಸ ಮಾಡಿದಂತಲ್ಲ. ನಿಮಗೆ ನೀವೇ ಮೋಸ ಮಾಡಿಕೊಂಡಂತೆ. ನೀವು ಪಾವತಿಸುವ ತೆರಿಗೆಯಿಂದ ದೇಶ ಅಭಿವೃದ್ಧಿಯಾಗಲು  ಸಾಧ್ಯ ಹಾಗಾಗಿ ಪ್ರತಿಯೊಬ್ಬರು ತೆರಿಗೆ ಪಾವತಿಸಬೇಕು. ನಾವೀಗ ಉದ್ಯಮ ಸರಳೀಕರಣ ನೀತಿ ಜಾರಿಗೆ ತಂದಿದ್ದೇವೆ ಎಂದೂ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ವಿವಿಧ ವಾಣಿಜ್ಯ ಮಂಡಳಿ, ವಾಣಿಜ್ಯ ಒಕ್ಕೂಟ, ಚಾರ್ಟರ್ಡ್ ಅಕೌಂಟೆಂಟ್ ಗಳ ಒಕ್ಕೂಟ ಮತ್ತು ಪ್ರಮುಖ ತೆರಿಗೆದಾರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

ಸುದ್ದಿ ಓದಿ