4 ಲಕ್ಷ ಅಂತರದ ಮತಗಳಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ನಾರಾ ಕರೆ.
ಬಳ್ಳಾರಿ,ನ.24; ನಗರದ ಕಮ್ಮಾಭವನದಲ್ಲಿ ನಾರಾ ಸೂರ್ಯನಾರಾಯಣರೆಡ್ಡಿ ಬಳಗದವರಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭಕ್ಕೆ ಸಂಸದ ಬಿ.ಎಸ್.ಉಗ್ರಪ್ಪ, ನಾರಾ ಸೂರ್ಯನಾರಾಯಣರೆಡ್ಡಿ, ಅಲ್ಲಂ ವೀರಭದ್ರಪ್ಪ, ಕಂಪ್ಲಿ ಶಾಸಕ ಗಣೇಶ್, ಮಹಾನಗರ ಪಾಲಿಕೆಯ ಸದಸ್ಯೆರು ಭಾಗವಹಿಸಿದ್ದರು. ಮೊನ್ನೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಬಿ.ಎಸ್ ಉಗ್ರಪ್ಪ ಅತ್ಯಂತ ಬಹುಮತದಿಂದ ಗೆದ್ದಿರುವ ಸಂದರ್ಭದಲ್ಲಿ ಮತ್ತು ಅದೇ ಸಂದರ್ಭದಲ್ಲಿ ಸೂರ್ಯನಾರಾಯಣರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷ ರಾಜ್ಯದ ಕೆಪಿಸಿಸಿ ಉಪಾಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ರೆಡ್ಡಿ ಅಭಿಮಾನಿಗಳು ಪಕ್ಷದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ದೊಡ್ಡಮಟ್ಟದಲ್ಲಿ ಆಯೋಜಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಸೂರ್ಯನಾರಾಯಣರೆಡ್ಡಿ ಅತೀ ಶೀಘ್ರದಲ್ಲೆ ದೇಶಾಧ್ಯಂತ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಮತ್ತೊಮ್ಮೆ ಬಿ.ಎಸ್ ಉಗ್ರಪ್ಪನವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯಾಥರ್ಿಯಾಗಿ ಕಣಕ್ಕೆ ಇಳಿಯಲಿದ್ದಾರೆಂದರು. ಮುಂಬರುವ ಚುನಾವಣೆಯಲ್ಲಿ ಉಗ್ರಪ್ಪನವರಿಗೆ 4 ಲಕ್ಷ ಅಧೀಕ ಮತಗಳ ಅಂತರದಿಂದ ಆರಿಸಿ ತರಬೇಕೆಂದು ಕೆಪಿಸಿಸಿ ಉಪಾಧ್ಯಕ್ಷರು ಕಾರ್ಯಕರ್ತರಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಳ್ಳಾರಿಯ ಜನತೆ ರಾಮುಲು, ಸುರೇಶಬಾಬು, ಸೋಮಶೇಖರೆಡ್ಡಿ, ಕರುಣಾಕರರೆಡ್ಡಿ, ಜನಾರ್ಧನರೆಡ್ಡಿ ಇವೆಲ್ಲವೂ ಹಳೆ ಚಕ್ರಗಳೆಂದು ವ್ಯೆಂಗೆ ಮಾಡಿದರು. ಅವರನ್ನೆಲ್ಲಾ ಬದಲಾಯಿಸಿ ಹೊಸ ಚಕ್ರ ಕಾಂಗ್ರೆಸ್ನ ಬಿ.ಎಸ್ ಉಗ್ರಪ್ಪನವರನ್ನು ಬೆಂಬಲಿಸಬೇಕೆಂದು ತಿಳಿಸಿದರು. ಪಕ್ಷ ಯಾವುದೇ ಜವಾಬ್ದಾರಿ ನೀಡಲಿ ಪಾಲನೆ ಮಾಡಲಿದ್ದೇನೆ ಮತ್ತು ಯಾವುದೇ ಸ್ಥಾನಕ್ಕೂ ಆಶೆ ಮಾಡುವನಲ್ಲ ಎಂದರು.