ಬಳ್ಳಾರಿ

ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾರಭರತ್ ರೆಡ್ಡಿ ಆಯ್ಕೆ

ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾರಭರತ್ ರೆಡ್ಡಿ ಆಯ್ಕೆ

ಬಳ್ಳಾರಿ:ಏ (15)ರಂದು ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ  ಭಾರಿ ಕುತೂಹಲ ಕೆರಳಿಸಿದ್ದ  ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ನಾರಾಭರತ್ ರೆಡ್ಡಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್ ವರಿಷ್ಠರು ಆಯ್ಕೆ ಮಾಡಿದ್ದಾರೆ.ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದುದರಿಂದ ಅಭ್ಯರ್ಥಿ ಆಯ್ಕೆ ವರಿಷ್ಠರಿಗೆ ತಲೆನೋವಾಗಿತ್ತು. ಹಾಗಾಗಿ, ಮೊದಲ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿ ಹೆಸರು ಇರಲಿಲ್ಲ.ಬಳ್ಳಾರಿ ನಗರ ಕ್ಷೇತ್ರಕ್ಕೆ ಸ್ಪರ್ಧಿಸಲು ಬಯಸಿ 3 ಹುರಿಯಾಳುಗಳು ಪಕ್ಷಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ ಮಾಜಿ ಸಚಿವ ಎಂ.ದಿವಾಕರ್ ಬಾಬು, ಮಾಜಿ ಸಂಸದ ಅನಿಲ್ ಲಾಡ್, ಬುಡಾದ ಮಾಜಿ ಅಧ್ಯಕ್ಷ ಜೆ. ಎಸ್‌.ಆಂಜನೇಯಲು ಹಾಗೂ ಟಚ್‌’ಫಾರ್ ಲೈಫ್ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಬಳ್ಳಾರಿ ಜಿ.ಪಂ.ನ ಕೊರಗುಂದಿ ಕ್ಷೇತ್ರದ ಮಾಜಿ ಸದಸ್ಯರೂ ಆದ ನಾರಾ ಭರತ್‌ರೆಡ್ಡಿಯವರ ನಡುವೆ ತೀವ್ರ ಪೈಪೋಟಿ ನಡೆದಿತ್ತು.ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ? ಎಂಬ ಚರ್ಚೆಗಳು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಲ್ಲಿ ನಡೆದಿದ್ದವು, ಇನ್ನು ಕೆಲವು ಆಕಾಂಕ್ಷಿಗಳಿಗೆ ಪಕ್ಷದ ವರಿಷ್ಠರು ಮನವೊಲಿಸಿ ಸಮಾಧಾನವನ್ನು ಪಡಿಸಿದ್ದರು. 

ನಂತರ ಎ ಐ ಸಿ ಸಿ ಹೈ ಕಮಾಂಡ್ ಆದೇಶದ ಮೇರೆಗೆ ಕೆಪಿಸಿಸಿ ರಾಜ್ಯಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಎಸ್‌.ಆಂಜನೇಯಲು ರವರನ್ನು ಹಾಗೂ ಭರತ್ ರೆಡ್ಡಿ ರವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಕೂಡಿಸಿ ಮಾತನಾಡಿಸುವ ಮೂಲಕ ಪಕ್ಷವು ಯಾರಿಗೂ ಟಿಕೆಟ್ ಕೊಟ್ಟರು ಸಹ ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಅದೇಶಿಸುವ ಮೂಲಕ ಸಲಹೆಯನ್ನು ನೀಡಿದ್ದರು ಅದರಂತೆಯೇ ಇಂದು ವರಿಷ್ಠರು ನಾರಾಭಾರತ್ ರೆಡ್ಡಿ ಅವರಿಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. 


ಸುದ್ದಿ ಓದಿ