ಬಳ್ಳಾರಿ

ನಂದಮೂರಿ ಕಲ್ಯಾಣರಾಮ್ ಅವರ 48ನೇ ಜನ್ಮ ದಿನಾಚರಣೆ

ನಂದಮೂರಿ ಕಲ್ಯಾಣರಾಮ್ ಅವರ 48ನೇ ಜನ್ಮ ದಿನಾಚರಣೆ

ಬಳ್ಳಾರಿ 06 :  ನಂದಮೂರಿ ಕಲ್ಯಾಣರಾಮ ಸೇವಾ ಸಮಿತಿಯಿಂದ ನಂದಮೂರಿ ಕಲ್ಯಾಣರಾಮ್ ಅವರ 48ನೇ ಜನ್ಮ ದಿನಾಚರಣೆಯನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ದಂಡುಪ್ರದೇಶದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊರರೋಗಿಗಳ ಆಸ್ಪತ್ರೆ ಬಳಿ ಇರುವ ಮದರ್ ತೆರೇಸಾ ಆಶ್ರಮದಲ್ಲಿ ಕಲ್ಯಾಣರಾಮ್ ಜನ್ಮ ದಿನಾಚರಣೆ ನಿಮಿತ್ತ ಅನ್ನದಾಸೋಹ ಕಾರ್ಯಕ್ರಮ ಏರಿ​‍್ಡಸಲಾಗಿತ್ತು.

ಆದೋನಿಯಿಂದ ಕಲ್ಯಾಣರಾಮ್ ರಾಷಾೊಧ್ಯಕ್ಷ ಗೋನಾ ಬಾವಿ ಗೋಪಾಲ್, ಬಳ್ಳಾರಿಯ ಸಂದೀಪ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿ ಜನ್ಮ ದಿನಾಚರಣೆಯ ಯಶಸ್ಸಿಗೆ ಸಹಕರಿಸಿದರು. ನಂದಮೂರಿ ಕಲ್ಯಾಣರಾಮ್ ಸೇವಾ ಸಮಿತಿ ಅಧ್ಯಕ್ಷ ಬಿ.ಹುಲುಗಪ್ಪ, ನಂದಮೂರಿ ಅಭಿಮಾನಿಗಳಾದ ಹೊನ್ನೂರ​‍್ಪ, ಉಮೇಶ್, ರಾಜ, ಶೇಖರ್, ಸರ್ವರ್, ರಿಯಾಜ್, ಫೋರ್ಟ್‌ ದುರ್ಗಾ, ವೆಂಕಟೇಶ್ ಇನ್ನಿತರರು ಇದ್ದರು. ಇದೇವೇಳೆ ಎನ್ ಕೆ ಆರ್ ಚಾರಿಟೇಬಲ್ ಸರ್ವೀಸಸ್ ನ ಬ್ಯಾನರ್ ಬಿಡುಗಡೆ ಜೊತೆಗೆ ಕೇಕ್ ಕಟ್ ಮಾಡಿ ಪರಸ್ಪರರು ಸಿಹಿ ವಿತರಿಸಿ ಸಂಭ್ರಮಿಸಿದರು. 


ಸುದ್ದಿ ಓದಿ