ಬಳ್ಳಾರಿ

ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಬಿ ನಾಗೇಂದ್ರ

ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಬಿ ನಾಗೇಂದ್ರ

ಲೋಕದರ್ಶನ ವರದಿ 

ಬಳ್ಳಾರಿ 19: ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಬಿ ನಾಗೇಂದ್ರ ರವರು ತಮ್ಮ ಸಾವಿರಾರು ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಭಾರಿ ಮೆರವಣಿಗೆಯಲ್ಲಿ ಬಂದು ಬುಧುವಾರ ಚುನಾವಣಾ ಅಧಿಕಾರಿಯದ ಹೇಮಂತ್ ಕುಮಾರ್ ಅವರಿಗೆ  ನಾಮ ಪತ್ರವನ್ನು ಸಲ್ಲಿಸಿದರು. ಇದಕ್ಕು ಮುಂಚೆ ಅವರು ಕೌಲ್ ಬಜಾರ್ ಖೂನಿಠಾಣಾ ಮಸೀದಿ ಹತ್ತಿರದಿಂದ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ, ಮತ್ತು ಸಾವಿರಾರು ಜನರೊಂದಿಗೆ ಮೆರವಣಿಗೆಯಲ್ಲಿ ಬಂದು ಮೋತಿ ವೃತ್ತದಲ್ಲಿರುವ ಏಳು ಮಕ್ಕಳ ತಾಯಿ ದೇವಿಗೆ ಪೂಜೆಯನ್ನು ಸಲ್ಲಿಸಿ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.  

  ಈ ಸಂದರ್ಭದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರ​‍್ಪ, ನಾರಾ ಸೂರ್ಯನಾರಾಯುಣರೆಡ್ಡಿ, ಬೈರದೇವನಹಳ್ಳಿ ಸತ್ಯನಾರಾಯಣ ರೆಡ್ಡಿ, ಸಂಸದ ನಾಸೀರ್ ಹುಸೇನ್, ನಾರಾ ಭರತ್ ರೆಡ್ಡಿ, ಹೂಮಾಯೂನ್ ಖಾನ್ ಸೇರಿದಂತೆ ಪಕ್ಷದ ಇತರ ಮುಖಂಡರು, ಪಾಲಿಕೆ ಸದಸ್ಯರು ಪಕ್ಷದ ಹಲವಾರು ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ