ಜಮಖಂಡಿ

ಒಳಮೀಸಲಾತಿ ಜಾರಿಗೆ ನಾಗಪ್ಪ ಹೆಗಡೆ ಹರ್ಷ

ಒಳಮೀಸಲಾತಿ ಜಾರಿಗೆ ನಾಗಪ್ಪ ಹೆಗಡೆ ಹರ್ಷ

ಜಮಖಂಡಿ,08 : ಸರ್ಕಾರದ ಮಟ್ಟದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಅನುಗುಣವಾಗಿ ದಲಿತ ಸಮುದಾಯಗಳ 30 ವರ್ಷಗಳ ಕಾಲ ಹೋರಾಟದ ಫಲವಾಗಿ ಒಳಮೀಸಲಾತಿ ಜಾರಿಗೆ ನಡೆದಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನಿಂದ ಸಾಂವಿಧಾನಿಕ ಚೌಕಟ್ಟು ಪಡೆಯುವಲ್ಲಿ ಜಯ ಸಿಕ್ಕಿರುವುದು ದಲಿತ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ತಾಲೂಕ ಕುರುಬ ಸಮಾಜದ ಯುವ ಮುಖಂಡ ನಾಗಪ್ಪ ಹೆಗಡೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕದ ಮಟ್ಟಿಗೆ ಒಳ ಮೀಸಲಾತಿ ಹೋರಾಟವು ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಹಕ್ಕು ಸಾಮಾಜಿಕ ನ್ಯಾಯಕ್ಕೆ ಹತ್ತಿರವಾಗಿದ್ದು, 30 ವರ್ಷ ಹೋರಾಟಕ್ಕೆ ಸಂದ ಜಯ ಇದಾಗಿದೆ, ದಲಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗಗಳ ಪರವಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡಬೇಕೆಂದು ತಾಲೂಕ ಕುರುಬರ ಸಂಘದ ಯುವ ಮುಖಂಡ ನಾಗಪ್ಪ ಹೆಗಡೆ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ 


ಸುದ್ದಿ ಓದಿ