ರಾಷ್ಟ್ರೀಯ ಸೇವೆಗಳ ಸಫಲತೆಗೆ ಎನ್.ಎಸ್.ಎಸ್. ಸಹಕಾರಿ: ಡಾ ಸರಸ್ವತಿ ಬೊಮ್ಮನಹಳ್ಳಿ
ರಾಣೀಬೆನ್ನೂರ 21: ರಾಷ್ಟ್ರೀಯ ಸೇವೆಗಳ ಮುಂಚೂಣಿಯಲ್ಲಿ ಎನ್.ಎಸ್.ಎಸ್. ಯೋಜನೆಗಳ ಸೇವಾ ಕಾರ್ಯವೂ ಅತ್ಯಂತ ಪ್ರಮುಖವಾಗಿದೆ. ಈ ಉದ್ದೇಶಿತ ಯೋಜನೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಸಮರ್ಕಪವಾಗಿ ಅಳವಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಸ್ಥಳೀಯ ಆರ್.ಟಿ.ಈ.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸರಸ್ವತಿ ಬೊಮ್ಮನಹಳ್ಳಿ ಹೇಳಿದರು.
ಅವರು ಇತ್ತೀಚೆಗೆ ತಮ್ಮ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳನ್ನು ತಾಲೂಕಿನ ವಿವಿಧ ಶಾಲೆ ಕಾಲೇಜುಗಳಿಗೆ ಸೇವಾ ಕಾರ್ಯಗಳಿಗಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನಿಯೋಜಿಸಿ ಅವರ ಬೀಳ್ಕೊಡುವ ಕಾರ್ಯಕ್ಕೆ ಚಾಲನೆ ನಿಡಿ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜಿನ ಆರಂಭಿಕ ಹಂತದಲ್ಲಿಯೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ತಮ್ಮ ಜೀವನದುದ್ದಕ್ಕೂ ಮಾನವೀಯ ಗುಣ ಲಕ್ಷಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದು ಎಂದ ಡಾ.ಸರಸ್ವತಿ ಅವರು ಎನ್ಎಸ್ಎಸ್ ಯೋಜನೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು, ಶಾಂತಿ ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ ಇವೆಲ್ಲ ಗುಣಗಳು ಅಳವಡಿಕೆಯಾಗಬೇಕಾದರೆ ಸೇವಾ ಯೋಜನೆಗೆ ಸೇರೆ್ಡಗೊಂಡ ವಿದ್ಯಾರ್ಥಿಗಳು ಮೊದಲು ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆ ಅಗತ್ಯವಿದೆ ಅದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನೇ ತಾವು ಸಮರ್ಿಸಿಕೊಳ್ಳಬೇಕಾಗುತ್ತದೆ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಎಫ್.ಹೆಚ್.ಮಾಚೇನಹಳ್ಳಿ ಐಕ್ಯೂಸಿ ಡಾ.ಮಧುಕುಮಾರ, ಅಜಯ್ಕುಮಾರ ಸೇರಿದಂತೆ ಉಪನ್ಯಾಸಕರು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ತಾಲೂಕಿನ ಇಟಗಿ, ಹಲಗೇರಿ, ದೇವರಗುಡ್ಡ, ಗುತ್ತಲ ಮತ್ತಿತರೆ ಗ್ರಾಮಗಳಲ್ಲಿರುವ ಕಾಲೇಜು, ಪ್ರೌಢಶಾಲೆಗಳಿಗೆ 40ಕ್ಕೂ ಹೆಚ್ಚು ಎನ್ಎಸ್ಎಸ್-ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.