ರಾಣೆಬೆನ್ನೂರ

ದೇಶಾಭಿಮಾನ ಮೂಡಿಸುಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿ

ದೇಶಾಭಿಮಾನ ಮೂಡಿಸುಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿ


ಲೋಕದರ್ಶನ ವರದಿ 

ರಾಣೇಬೆನ್ನೂರು 13:  ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ತ್ಯಾಗ ಮತ್ತು ದಕ್ಷತೆಯನ್ನು ಬೆಳೆಸುವಲ್ಲಿ  ದೇಶಾಭಿಮಾನ ಮೂಡಿಸುಲ್ಲಿ ಎನ್‌.ಎಸ್‌.ಎಸ್‌. ಶಿಬಿರ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸುಣಕಲ್ ಬಿದರಿ ಎಸ್‌.ಎಸ್‌.ಎಸ್‌. ಕಾಲೇಜಿನ  ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಹೆಚ್‌. ಶಿವಾನಂದ ತಿಳಿಸಿದರು.  

ರಾಣೇಬೆನ್ನೂರಿನ  ಬಿ.ಎ.ಜೆ.ಎಸ್‌.ಎಸ್‌. ಪ್ರಥಮ ಧರ್ಜೆ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ರಾಷ್ರ್ಠೀಯ ಸೇವಾ ಯೋಜನಾ ಘಟಕವು ಮಣಕೂರು  ಗ್ರಾಮದಲ್ಲಿ ಆಯೋಜಿಸಿದ್ದ ಎನ್‌.ಎಸ್‌.ಎಸ್‌. ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಿಕ್ಷಣದೂಂದಿಗೆ ಸೇವೆ ಮತ್ತು ಶಿಕ್ಷಣದೂಂದಿಗೆ ವ್ಯಕ್ತಿ ವಿಕಸನ ಎಂಬ ಎರಡು ಧ್ಯೇಯಗಳೊಂದಿಗೆ ಗಾಂಧೀಜಿಯವರ ಜನ್ಮಶತಮನೋತ್ಸವ ಸಂದರ್ಭದಲ್ಲಿ 1969 ರ ಸೆಪ್ಟೇಂಬರ್ 24 ರಂದು ರಾಷ್ಟ್ರೀಯ ಸೇವಾ ಯೋಜನೆ ಅನುಷ್ಠಾನ ಗೊಂಡಿತು ಈ ಯೋಜನೆ ಇಂದು 500 ವಿಶ್ವ ವಿದ್ಯಾಲಯಗಳಲ್ಲಿ ಮತ್ತು ನಿರ್ದೇಶನಾಲಯಗಳಲ್ಲಿ ಸುಮಾರು 45 ಲಕ್ಷ ಸ್ವಯಂ ಸೇವಕ ಸೇವಕಿಯರಿದ್ದಾರೇ, ಕರ್ನಾಟಕದಲ್ಲಿ 5 ಲಕ್ಷ ಸ್ವಯಂ ಸೇವಕ ಸೇವಕಿಯರು ದಾಖಲಿಸಿಕೊಂಡಿದ್ದಾರೆ ದೇಶದಲ್ಲಿ ಅತ್ಯಂತ ದೊಡ್ಡ ಪಡೆಯನ್ನು ಹೋಂದಿರುವ ಎಕೈಕ ಯೋಜನೆಯಾಗಿದೆ ಇಲ್ಲಿ ಸ್ನೇಹ, ಸಹಕಾರ, ನಿಸ್ವಾರ್ಥತೆಯನ್ನು ಧ್ಯೇಯವಾಗಿಸಿಕೊಂಡು ದೇಶಪ್ರೇಮ ಏಕತೆ, ಪ್ರಜಾಪ್ರಬುತ್ವ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ. ಭವಿಷ್ಯದ ಬೆಳಕನ್ನು ಜಗತ್ತಿಗೆ ತೋರಿಸುವ ಉತ್ತಮ ಶಿಬಿರವಾಗಿದೆ ಎಂದರು. 

ಬಸನಗೌಡ ಪಾಟೀಲ್ ಪಿ.ಡಿ.ಓ. ಮಾತನಾಡಿ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು ಇಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಸಾರ್ವಜನಿಕರಲ್ಲಿ ಸ್ವಚ್ಚೆತೆ, ಶೌಚಾಲಯಗಳ ಅರಿವು, ಘನ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಬೇಕು. ಸರ್ಕಾರದ ಯೋಜನೆಗಳನ್ನು ಸರಿಯಾಗಿ ಉಪಯೊಗಿಸಕೊಳ್ಳಬೇಕು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವ್ಯಾಸಾಂಗ ಮಾಡಿ ಉನ್ನತ ಸಾಧನೆಯನ್ನು ಮಾಡುತ್ತಾ ಸ್ವಾಸ್ಥ್ಯಸಮಾಜನಿರ್ಮಾಣದ ಕಡೆಗೆ ಗಮನಹರಿಸಬೇಕೆಂದರು. 

ಶಿಕ್ಷಕ ಲಕ್ಷ್ಮಪ್ಪ ವಡೇರಹಳ್ಳಿ ಮಾತನಾಡಿ ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತರಾಗದೆ ಸಮಾಜಕಟ್ಟುವಲ್ಲಿ ಪ್ರಮುಖ ಕೊಡುಗೆ ನೀಡಬೇಕು ನೀವು ಮಾಡುತ್ತಿರುವ ಕೆಲಸ ಸಮಾಜಕ್ಕೆ ಕಾಣುವಂತಾಗಬೇಕು ಆಗಲೆ ನಿಮ್ಮನ್ನು ಸಮಾಜ ಗುರುತಿಸಿ ಗೌರವಿಸುತ್ತದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶ್ರೀಕಾಂತ ಕುಂಚೂರು ವಹಿಸಿಕೊಂಡಿದ್ದರು  ತಿಪ್ಪಣ್ಣ ಗೌಡ್ರ, ಮಾದೇವಪ್ಪ ಹೊಸ್ಮನಿ , ಗುಡ್ಡಪ್ಪ ಹೂಸ್ಮನಿ ಕೆ.ಸಿ. ನಾರಜ್ಜಿ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಎಮ್‌.ಡಿ. ಹೊನ್ನಮ್ಮನವರ, ಪ್ರೊ. ಕುಮಾರ ಬೆಣ್ಣಿ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ