ಸುಶಾಂತ್ ಪ್ರಕರಣ; ಹತ್ಯೆ ಪುರಾವೆ ದೊರೆತಿಲ್ಲ, ಆತ್ಮಹತ್ಯೆಯ ತನಿಖೆ ನಡೆಸಲಿರುವ ಸಿಬಿಐ
ಪುಣೆ- ಸೆ 2 ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವಿನ ಪ್ರಕರಣದಲ್ಲಿ ಯಾವುದೇ ಹತ್ಯೆಗೆ ಸಂಬಂಧಿಸಿದ ಯಾವುದೇ ಸಾಕ್ಷಿಗಳು ದೊರೆತಿಲ್ಲ. ಆದರೆ, ಅವರ ಆತ್ಮಹತ್ಯೆ ಕೂಡ ಸಹಜ ಕಾರಣಗಳಿಂದ ನಡೆದಿದೆ ಎಂಬುದರ ಕುರಿತು ಇನ್ನೂ ಸಾಬೀತಾಗಿಲ್ಲ.
ಜೂ.14ರಂದು ಸುಶಾಂತ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಅದು ಹತ್ಯೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ಮೂರು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈಗ ತಂಡ ಪ್ರಕರಣವನ್ನು ಆತ್ಮಹತ್ಯೆಯ ಪ್ರಕರಣದಿಂದ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಆದರೆ, ಹತ್ಯೆಯ ಅನುಮಾನದ ತನಿಖೆ ಪೂರ್ಣಗೊಂಡಿಲ್ಲ ಎಂದು ಸಿಬಿಐ ತಿಳಿಸಿದೆ.
ಜೊತೆಗೆ, ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌಕ್ ಅವನ್ನು ಕೂಡ ಸಿಬಿಐ ತನಿಖಾಧಿಕಾರಿಗಳು ತನಿಖೆ ನಡೆಸಿದ್ದಾರೆ.