ರಾಷ್ಟ್ರೀಯ

ಕೋವಿಡ್ ನಂತರದ ತೊಂದರೆ: ಎನ್‍ಸಿಪಿ ಶಾಸಕ ಭರತ್ ಭಾಲ್ಕೆ ನಿಧನ

ಕೋವಿಡ್ ನಂತರದ ತೊಂದರೆ: ಎನ್‍ಸಿಪಿ ಶಾಸಕ ಭರತ್ ಭಾಲ್ಕೆ ನಿಧನ

ಪುಣೆ, ನವೆಂಬರ್ 28: ಕೋವಿಡ್ ನಂತರದ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್‌ಸಿಪಿ ಶಾಸಕ ಭರತ್ ಭಾಲ್ಕೆ ಅವರು ನಿಧನರಾಗಿದ್ದಾರೆ.

ಸೋಲಾಪುರ ಜಿಲ್ಲೆಯ ಪಂಢರಾಪುರ- ಮಂಗಳವೇಧ ಕ್ಷೇತ್ರದ ಮೂರು ಅವಧಿಯ ಶಾಸಕರಾದ ಭಾಲ್ಕೆ (60) ಅವರನ್ನು ತೀವ್ರ ಉಸಿರಾಟದ ತೊಂದರೆಯ ಕಾರಣ ನವೆಂಬರ್ 9 ರಂದು ಪುಣೆ ಮೂಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಸೋಂಕಿಗೆ ಒಳಗಾಗಿದ್ದ ಭಾಲ್ಕೆ ಚೇತರಿಸಿಕೊಂಡ ನಂತರ ಅಕ್ಟೋಬರ್ 30 ರಂದು ಮನೆಗೆ ಮರಳಿದ್ದರು ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ತಿಳಿಸಿದ್ದಾರೆ.

ಆದರೆ ಕೆಮ್ಮಿನ ಕಾರಣ ಅವರು ನವೆಂಬರ್ 9 ರಂದು ಮತ್ತೆ ಆಸ್ಪತ್ರೆಗೆ ದಾಖಲಾದರು.  ಅವರ ದೇಹಸ್ಥಿತಿ ಇತ್ತೀಚೆಗೆ ಹದಗೆಟ್ಟು ವೆಂಟಿಲೇಟರ್ ಬೆಂಬಲದಲ್ಲಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಸಂಜೆ  ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.

ಸುದ್ದಿ ಓದಿ