ಅರ್ಜುನ್ ರಾಂಪಾಲ್ ಪ್ರೇಯಸಿ ಗೇಬ್ರಿಯಾಲ ವಿಚಾರಣೆ ನಡೆಸಿದ ಎನ್‌ಸಿಬಿ
ಮುಂಬೈ, 12: ಮಾದಕ ವ್ಯಸನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರೇಯಸಿ ಗೇಬ್ರಿಯೆಲ್ಲಾ ಡೆಮಿಟ್ರಿಯಾಡೆಸ್ ಅವರನ್ನು ಎನ್‌ಸಿಬಿ ಗುರುವಾರ ವಿಚಾರಣೆ ನಡೆಸಿದೆ.
33 ವರ್ಷದ ಗೇಬ್ರಿಯೆಲ್ಲಾ ಅವರಿಗೆ ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ಅರ್ಜುನ್ ರಾಂಪಾಲ್ ಅನ್ನು ಕೂಡ ವಿಚಾರಣೆ ನಡೆಸುವುದಾಗಿ ಎನ್‌ಸಿಬಿ ತಿಳಿಸಿದೆ.
ಈಗಾಗಲೇ ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೌಹಿಕ್ ಸೇರಿದಂತೆ 20ಕ್ಕಿಂತ ಹೆಚ್ಚು ಜನರನ್ನು ಎನ್‌ಸಿಬಿ ಪ್ರಶ್ನಿಸಿದೆ.