ರಾಷ್ಟ್ರೀಯ

ಮೆಂಧರ್‌ : ಭದ್ರತಾಪಡೆಗಳಿಂದ ಹೆರಾಯಿನ್ ವಶ

ಮೆಂಧರ್‌ : ಭದ್ರತಾಪಡೆಗಳಿಂದ ಹೆರಾಯಿನ್ ವಶ

ಜಮ್ಮು, ನವೆಂಬರ್ 03: ಕಾಶ್ಮೀರದ ಪೂಂಚ್ ಜಿಲ್ಲೆಯ ಮೇಂಧರ್ ತಹಸಿಲ್ ಗಡಿಯಲ್ಲಿ ಭದ್ರತಾ ಪಡೆಗಳು ಮಾದಕ ದ್ರವ್ಯ ವಶಪಡಿಸಿಕೊಂಡಿದೆ.

ಪೊಲೀಸರು, ರಾಷ್ಟ್ರೀಯ ರೈಫಲ್ಸ್ ಜತೆಗೂಡಿ ಭದ್ರತಾ ಪಡೆಗಳು ಮಾದಕವಸ್ತು ಕಳ್ಳಸಾಗಣೆ ಮತ್ತು ಮಾದಕವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿದ್ದು,  ಮೆಂಧರ್‌ ಬಳಿಯ ಧಾರ್ಗ್ಲೂನ್‌ನ ಸಾಮಾನ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶೋಧದ ವೇಳೆ ಈ ಪ್ರದೇಶದಿಂದ 4 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ.

 

ಕಳೆದ 20 ದಿನಗಳಲ್ಲಿ ಜಂಟಿ ತಂಡಗಳು ಈ ಪ್ರದೇಶದಲ್ಲಿ ಮಾದಕವಸ್ತುಗಳ ಸತತ ನಾಲ್ಕನೇ ಬಾರಿಗೆ ಮಾದಕ ದ್ರವ್ಯ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಸುದ್ದಿ ಓದಿ