ಮ್ಯಾನ್ಮಾರ್ನಲ್ಲಿ ಕರೋನ ಪೀಡಿತರ ಸಂಖ್ಯೆ 1,216 ಕ್ಕೆ ಏರಿಕೆ
ಯಾಂಗೊನ್, ಸೆಪ್ಟೆಂಬರ್ 5: ಮ್ಯಾನ್ಮಾರ್ನಲ್ಲಿ ಶನಿವಾರ ಹೊಸದಾಗಿ 45 ಹೊಸ ಕರೋನ ಸೋಂಕು ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1,216 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕ್ರೀಡಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸದಾಗಿ ದೃಡಪಡಿಸಿದ ಪ್ರಕರಣಗಳಲ್ಲಿ 38 ರೋಗಿಗಳು ಯಾಂಗೊನ್ ಪ್ರದೇಶದವರಾಗಿದ್ದರೆ, ಉಳಿದವರು ಬಾಗೊ ಪ್ರದೇಶ, ರಾಖೈನ್ ಮತ್ತು ಶಾನ್ ರಾಜ್ಯಗಳವರು ಎಂದೂ ಸಚಿವಾಲಯದ ತಿಳಿಸಿದೆ.
ಸೋಂಕಿನಿಂದ 7 ಜನ ಮೃತಪಟ್ಟಿದ್ದರೆ, ಈವರೆಗೆ 359 ರೋಗಿಗಳು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.ಮ್ಯಾನ್ಮಾರ್ ನಲ್ಲಿ ಮೊದಲ ಎರಡು ಪ್ರಕರಣಗಳು ಈ ವರ್ಷದ ಮಾರ್ಚ್ 23 ರಂದು ವರದಿಯಾಗಿತ್ತು.