ರಾಷ್ಟ್ರೀಯ

ತಮಿಳುನಾಡು ಚುನಾವಣೆಯಲ್ಲಿ ನನ್ನ ಪಾತ್ರ ಇರುತ್ತದೆ; ಎಂ.ಕೆ.ಅಳಗಿರಿ

ತಮಿಳುನಾಡು ಚುನಾವಣೆಯಲ್ಲಿ ನನ್ನ ಪಾತ್ರ ಇರುತ್ತದೆ; ಎಂ.ಕೆ.ಅಳಗಿರಿ

ಮಧುರೈ, ಡಿಸೆಂಬರ್ 1: ಮುಂದಿನ ನಾಲ್ಕೈದು ತಿಂಗಳಲ್ಲಿ  ತಮಿಳುನಾಡು ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಪಾತ್ರವನ್ನು ಸಾಬೀತುಪಡಿಸುತ್ತೇನೆ ಎಂದು ಡಿಎಂಕೆ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಎಂ ಕೆ ಅಳಗಿರಿ ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ  ಚುನಾವಣೆಗಳ ಕಾರ್ಯತಂತ್ರಗಳ ಬಗ್ಗೆ ನಿರ್ಧರಿಸುತ್ತೇವೆ ಎಂದರು.

'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪಾತ್ರ ಇರುತ್ತದೆ' 'ಎಂದು ಅವರು ಚುಟುಕಾಗಿ ಉತ್ತರಿಸಿದರು.

ಬಿಜೆಪಿಗೆ ಸೇರುತ್ತೀರಾ ಎಂಬ ಪ್ರಶ್ನೆಗೆ,  ಸುಳ್ಳು, ಊಹಾಪೋಹಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳಿದರು.

ಹೊಸ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯ ಬಗ್ಗೆ, ದಿವಂಗತ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರ ಹಿರಿಯ ಮಗನಾದ ಅಳಗಿರಿ. '' ನನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಒಂದು ವಾರದ ಹಿಂದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಗರಕ್ಕೆ ಭೇಟಿ ನೀಡುವ ಮುಂಚಿತವಾಗಿ, ಮಾಜಿ ಡಿಎಂಕೆ ಸಂಸದ ಕೆ ಪಿ ರಾಮಲಿಂಗಂ ಅವರನ್ನು ಬಿಜೆಪಿಗೆ ಸೇರಿಕೊಂಡಿದ್ದರು. ಮಾತ್ರವಲ್ಲ  ಈ ವೇಳೆ, ಅಲಗಿರಿ ಅವರನ್ನು ಕೇಸರಿ ಪಕ್ಷಕ್ಕೆ ಸೇರಲು ಮನವೊಲಿಸುವುದಾಗಿ  ಶಾ ಹೇಳಿದ್ದರು.

ಮಾಧ್ಯಮಗಳಲ್ಲಿ ಬಂದ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ತಮಿಳುನಾಡು ಅಧ್ಯಕ್ಷ ಎಲ್ ಮುರುಗನ್, ಅಳಗಿರಿ ಬಿಜೆಪಿಗೆ ಸೇರಲು ಬಯಸಿದರೆ ಅವರನ್ನು ಸ್ವಾಗತಿಸಲು ತಮ್ಮ ಪಕ್ಷ ಸಿದ್ಧವಾಗಿದೆ ಎಂದು ಹೇಳಿದ್ದರು.

"ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. (ಅಂತಹ ಸಾಧ್ಯತೆಯ ಬಗ್ಗೆ) ... ನಾನು ಅವರೊಂದಿಗೆ ಮಾತನಾಡಲಿಲ್ಲ. ನಾವು ಮುಕ್ತರಾಗಿದ್ದೇವೆ, ಅವರು  ಪಕ್ಷಕ್ಕೆ ಸೇರಲು ಬಯಸಿದರೆ, ನಾವು ಅವರನ್ನು ಸ್ವಾಗತಿಸಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರ ಹಿರಿಯ ಸಹೋದರ ಅಳಗಿರಿ  ಈ ವರದಿಗಳನ್ನು ನಿರಾಕರಿಸಿದ್ದು, ಬಿಜೆಪಿಯ ಯಾರೂ ಕೂಡ ಅವರೊಂದಿಗೆ ಮಾತನಾಡಲಿಲ್ಲ ಎಂದು ಹೇಳಿದರು.

ಸುದ್ದಿ ಓದಿ