ತಾಲೂಕಿನ ಅಭಿವೃದ್ಧಿಯೇ ನನ್ನ ಪರಮ ಗುರಿ: ಸಚಿವ ಆರ್. ಶಂಕರ್
ರಾಣೇಬೆನ್ನೂರ 19: ರಾಣೀಬೆನ್ನೂರ ತಾಲೂಕು ನನ್ನ ಕರ್ಮಭೂಮಿ ಪಕ್ಷೇತರನಾಗಿ ಸ್ಪರ್ಧಿಸಿದಾಗ ನನ್ನ ಕೈ ಹಿಡಿದ ತಾಲೂಕಿನ ಮತದಾರರನ್ನು ಎಂದಿಗೂ ಮರೆಯುವುದಿಲ್ಲ ಈ ತಾಲೂಕಿನ ಅಭಿವೃದ್ಧಿಯೇ ನನ್ನ ಪರಮ ಗುರಿ ನಾನು ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಹಾಗೂ ಅಧಿಕಾರದಿಂದ ಹೊರ ಗಿದ್ದ ಸಂದರ್ಭದಲ್ಲಿ ನಂತರ ಯಡಿಯೂರ್ಪನವರು ಮುಖ್ಯ ಮಂತ್ರಿಯಾದ ಮೇಲೆ ತಾಲೂ ಕಿಗೆ ನೀರೀಕ್ಷೆಗೂ ಮೀರಿ ಅನು ದಾನ ತಂದಿದ್ದೇನೆ ನಂತರ ವಿಧಾನ ಪರಿಷತ್ತಿನ ಸದಸ್ಯನಾಗಿ, ಸಚಿವನಾಗಿಯೂ ಕೂಡಾ ಅನು ದಾನ ತರಲು ನಿರಂತರ ಶ್ರಮಿ ಸುತ್ತಿದ್ದೇನೆ. ನಾನೆಂಬು ದನ್ನು ಬಿಟ್ಟು ನಾವೆಂಬ ತತ್ವದಡಿ ಶಾಸ ಕರ ಜೊತೆ ಕೈಜೋಡಿಸಿ ತಾಲೂಕಿನ ಅಭಿವೃದ್ಧಿಗೆ ಶ್ರಮಿ ಸುವೆ ಎಂದು ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ಹೇಳಿದರು.
ಅವರು ಭಾನುವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಸಮ್ಮಿಶ್ರ ಸರ ಕಾರಕ್ಕೆ ರಾಜೀನಾಮೆ ನೀಡಿದಾಗ ಅನರ್ಹತೆಗೊಳ ಗಾದಾಗ ಮುಖ್ಯಮಂತ್ರಿ ಯಡಿ ಯೂರ್ಪನವರು ತಾಲೂಕಿನ ಅಭಿವೃದ್ಧಿಗಾಗಿ 35 ಕೋಟಿ ಹಣ ಬಿಡುಗಡೆ ಮಾಡಿದ್ದರು. ಆ ಹಣದಲ್ಲಿ ಅಭಿವೃದ್ಧಿ ಕಾಮ ಗಾರಿ ನಡೆದಿವೆ. ನಂತರ ನಾನು ಚುನಾವಣೆಗೆ ಸ್ಪರ್ಧಿಸದೇ ಪಕ್ಷದ ಆದೇಶದಂತೆ ಅರುಣ ಕುಮಾರಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದರಿಂದ ಕ್ಷೇತ್ರದ ಮತ ದಾರರು ಅವರನ್ನು ಗೆಲ್ಲಿಸಿದ್ದಾರೆ. ನಾವಿಬ್ಬರೂ ಸೇರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಕೆರೆತುಂಬಿಸುವ ಯೋಜನೆಗೆ ಸರಕಾರದಿಂದ ಅನುದಾನ ಬಿಡುಗಡೆ ವಿಚಾರ ವಾಗಿ ಇತ್ತೀಚಿಗೆ ಪಕ್ಷದ ಕಾರ್ಯಕರ್ತರೊಬ್ಬರು ಶಾಸಕ ರಿಗೆ ನೋವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಪೊಸ್ಟ್ಗೆ ಸ್ಪಷ್ಟಿಕರಣ ನೀಡಿದರು.
ಮುಂದಿನ ದಿನ ಗಳಲ್ಲಿ ರಿಂಗ್ರೋಡ್, ಮುದೇ ನೂರ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸುವ ಚಿಂತನೆಯಿದೆ. ಕೆರೆಗಳ ಅಭಿ ವೃದ್ಧಿಗೆ ಮುಖ್ಯಮಂತ್ರಿಗಳು 206 ಕೋಟಿರೂ.ಅನುದಾನ ಬಿಡುಗಡೆ ಮಾಡಿದ್ದಾರೆ. ಈ ನಿಟ್ಟಿ ನಲ್ಲಿ ಮುಖ್ಯಮಂತ್ರಿ ಗಳನ್ನು ಕರೆಯಿಸಿ ಅವ ರಿಂದಲೇ ಕೆರೆ ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ನೀಡುವ ಕುರಿತು ಶಾಸಕರ ಜತೆ ಮಾತ ನಾಡಿ ನಿಗಧಿ ಮಾಡುತ್ತೇವೆ. ನಗರ ಹಾಗೂ ಗ್ರಾಮೀಣ ಭಾಗದ ಕೆಲವೆಡೆ ಕಾಮಗಾರಿ ಗಳು ಕಳಪೆಯಾಗಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿದ್ದು ಅಧಿಕಾರಿಗಳು ಕೂಡಲೇ ಇದನ್ನು ಸರಿಪಡಿಸ ಬೇಕು ಇಲ್ಲವಾದರೆ ಅವರನ್ನೇ ಹೊಣೆಗಾರರನ್ನಾಗಿಸಬೇಕಾಗುತ್ತದೆ. ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗು ವುದು ಹಾಗೂ ನೇರವಾಗಿ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿ ಹರಿಹರದ ದ್ವಿಪಥದ ಬೈಪಾಸ್ ರಸ್ತೆ ಸಮರ್ಕ ವಾಗಿದ್ದು ಮೋಟೆಬೆನ್ನೂರ ಕಡೆಗಿನ ದ್ವಿಪಥದ ಬೈಪಾಸ್ ರಸ್ತೆ ಕಳಪೆಯಾಗಿರುವುದನ್ನು ಪ್ರಸ್ಥಾ ಪಿಸಿ ಈ ಬಗ್ಗೆ ತನಿಖೆಗೆ ಆದೇಶಿ ಸುವುದಲ್ಲದೇ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳ ಲಾಗುವುದು. ಅಭಿವೃದ್ಧಿ ಕಾಮ ಗಾರಿಗಳ ಭೂಮಿ ಪೂಜೆ-ಗುದ್ದಲಿ ಪೂಜೆ-ಉದ್ಘಾಟನೆಗೆ ಅಧಿಕಾರಿಗಳು ಪೊಟೋ ಕಾಲ್ ಉಲ್ಲಂಘಿಸುತ್ತಿದ್ದು ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ. ಇದೇ ನೀತಿ ಮುಂದುವರೆದರೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿ ಕಾರಿಗಳಿಗೆ ದೂರು ಸಲ್ಲಿಸ ಲಾಗುವುದೆಂದು ಹೇಳಿದರು. ಈ ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ರಾಜು ಅಡಿವೆಪ್ಪನವರ, ಜಗ ದೀಶ ಯಲಿಗಾರ ಉಪಸ್ಥಿತರಿದ್ದ್ದರು.