ಬಳ್ಳಾರಿ

ಮುಸ್ಲಿಂ ಮುಖಂಡರುಗಳು ಮತ್ತೆ ಕಾಂಗ್ರೆಸ್ಸಿನತ್ತ ಮುಖ

ಮುಸ್ಲಿಂ ಮುಖಂಡರುಗಳು ಮತ್ತೆ ಕಾಂಗ್ರೆಸ್ಸಿನತ್ತ ಮುಖ

ಬಳ್ಳಾರಿ:  ನಗರದಲ್ಲಿ  ಕೌಲ್ ಬಜಾರ್ 30ನೇ ವಾರ್ಡಿನ  ಎರಡು ದಿನಗಳ ಕೆಳಗಡೆ ಮುಸ್ಲಿಂ  ಮುಖಂಡರುಗಳು   ಬಿಜೆಪಿಗೆ ಸೇರೆ​‍್ಡಯಾಗಿ ಮತ್ತೆ ಕಾಂಗ್ರೆಸ್ ನ  ಬಳ್ಳಾರಿ ಗ್ರಾಮಾಂತರ  ಶಾಸಕರಾದ  ಬಿ.ನಾಗೇಂದ್ರ ಅವರ ಸಮ್ಮುಖದಲ್ಲಿ ಅಪಾರ  ಮುಸ್ಲಿ ಮುಖಂಡರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ  ಸೇರೆ​‍್ಡಯಾದರು.ಇದೇ ವೇಳೆಯಲ್ಲಿ  ಶಾಸಕ ಬಿ ನಾಗೇಂದ್ರ ಮಾತನಾಡಿ, ಗ್ರಾಮೀಣ ಕ್ಷೇತ್ರದ ವಾರ್ಡ್‌ ಗಳಲ್ಲಿ ಸ್ವಚ್ಛತೆ ಕಾಪಾಡುವುದು, ಶುದ್ಧ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮಾಡುವ ಮೂಲಕ ವಾರ್ಡ್‌ ಗಳ ಅಭಿವೃದ್ಧಿ ಪಡಿಸುವುದೇ ನನ್ನ ಗುರಿ ಎಂದರು. ತಮಗೆ ಕಷ್ಟ ಬಂದಾಗ ಮಧ್ಯ ರಾತ್ರಿಯಲ್ಲಿ ಸಹ ನಾನು ನಿಮ್ಮ ಸೇವೆ ಮಾಡಲು ಸದಾ ಸಿದ್ದನಾಗಿರುತ್ತೇನೆ. ಸಮುದಾಯದ ಜನರಿಗೆ ಯಾರಾದರೂ ಭಯಪಡಿಸಿದರೆ ಹೆದರಬಾರದು ನಾವೆಲ್ಲ ನಿಮ್ಮ ಜೊತೆ  ನಾವು ಇದ್ದೇವೆ ಎಂದು ಮಾತನಾಡಿದರು.  ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾದ ಮುಸ್ಲಿಂ ಮುಖಂಡರಾದ ಖಾಜಾ ಸಾಬ್, ಶೇಕ್ ಮಿಸುಬದ್ದೀನ್, ನಜೀರ್, ನವೀದ್, ಮುಕ್ತೈರ್, ಇಸ್ಮಾಯಿಲ್, ರಫೀಕ್, ಜಾಫರ್, ಮುನೀರ್, ಬಶೀರ್, ಶಾಫಿ, ಹಾದಿ, ಜಾಕೀರ್, ಸುಹೇಲ್, ಪಾಷಾ  ಸೇರಿದಂತೆ ನೂರಾರು ಬಿಜೆಪಿ ಮುಖಂಡರನ್ನು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ತುಂಬು ಹೃದಯದಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು. 


ಸುದ್ದಿ ಓದಿ