ಹೊಸಪೇಟೆ

ಹೊಸಪೇಟೆಯಲ್ಲಿ ಪಂ. ಪುಟ್ಟರಾಜ ಗವಾಯಿಗಳಿಗೆ ಸಂಗೀತ ನಮನ

ಹೊಸಪೇಟೆಯಲ್ಲಿ ಪಂ. ಪುಟ್ಟರಾಜ ಗವಾಯಿಗಳಿಗೆ ಸಂಗೀತ ನಮನ

ಲೋಕದರ್ಶನ ವರದಿ 

ಹೊಸಪೇಟೆ 10: ನಗರದ ಗೌತಮ ಬುದ್ಧ ಫಂಕ್ಷನ್ ಹಾಲ್‌ನಲ್ಲಿ ಗಾನಗಂಗಾ ಕಲಾ ಪ್ರತಿಷ್ಠಾನದ ವತಿಯಿಂದ ಲಿಂಗೈಕ್ಯ ಡಾ. ಪಂ.ಪುಟ್ಟರಾಜಕವಿ ಗವಾಯಿಯವರ ಪುಣ್ಯಸ್ಮರಣೆಯ ಅಂಗವಾಗಿ ಸಂಗೀತ ನಮನ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ನಂತರ ಕಂಪ್ಲಿಯ ಉದ್ಯಮಿಗಳಾದ ಹಾಗೂ ಸಮಾಜ ಸೇವಕರಾದ ಕೆ.ಎಂ.ಹೇಮಯ್ಯಸ್ವಾಮಿ ರವರು ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಪಂ.ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳು ಗದಗಿನಲ್ಲಿ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿ ಬೆಳಸಿದವರಲ್ಲಿ ಮೊದಲಿಗರಾಗಿದ್ದು, ಇವರು ಈ ಆಶ್ರಮದಲ್ಲಿ ಸಾವಿರಾರು ಅಂಧಅಂಗವಿಕಲ ಅನಾಥರ ಬಡ ಮಕ್ಕಳಿಗೆ ಉಚಿತವಾಗಿ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತವನ್ನು ಕಲಿಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನವನ್ನು ರೂಪಿಸಿರುತ್ತಾರೆ.  


ರಾಷ್ಟ್ರಮಟ್ಟಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿರುತ್ತಾರೆ. ಪಂಡಿತ ಎಂ.ವೆಂಕಟೇಶ ಕುಮಾರ್ ಅಂತಹ ದಿಗ್ಗಜರು ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ತಂದುಕೊಟ್ಟಿರುತ್ತಾರೆ. ಹಾಗೂ ಹಿಂದುಸ್ಥಾನಿ ಶಾಸ್ತ್ರಿಯ ಸಂಗೀತದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಇಂತಹ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆಯನ್ನು ಪ್ರತೀ ವರ್ಷವು ನಿರಂತರವಾಗಿ ತಪ್ಪದೆ ಯಲ್ಲಪ್ಪ ಭಂಡಾರ್‌ಧಾರ್‌ರವರು ನಡೆಸಿಕೊಂಡು ಬರುತ್ತಿದ್ದಾರೆಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


ನಂತರ ಮುಖ್ಯ ಅಥಿತಿಗಳಾಗಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷರು ಹಾಗೂ ವಕೀಲರಾದ ಪಿ.ವೆಂಕಟೇಶ್ ಹಾಗೂ ಉಪಾಧ್ಯಕ್ಷರಾದ ಗುಜ್ಜಲ್ ಗಣೇಶ್, ಮಾರೆಣ್ಣ, ಹಲೋಜೋಶಿ, ತುರುವನೂರು ಮಲ್ಲಿಕಾರ್ಜುನ, ಗಂಟೆ ಸೋಮಶೇಖರ, ಚಿದಾನಂದರಾರಾವಿ, ಚಲನಚಿತ್ರದ ನಿರ್ದೇಶಕರಾದ ಜೋಗಿ ತಾಯಪ್ಪ, ಗಾಯಕಿಯರಾದ ಕಮಲಾಕುಲಕರ್ಣಿ, ಹಾಗೂ ಮುಂತಾದವರು ಭಾಗವಹಿಸಿದ್ದರು.  


ಸುದ್ದಿ ಓದಿ