ಮನಸ್ಸನ್ನು ಪ್ರಫುಲ್ಲಗೊಳಿಸುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ: ರುದ್ರೇಶ ಬಡಿಗೇರ.
ಲೋಕದರ್ಶನ ವರದಿ
ರಾಣೇಬೆನ್ನೂರು 10: ಸಂಗೀತವು ಮನುಷ್ಯನ ಮನಸ್ಸನ್ನು ಅರಳಿಸುವ ಶಕ್ತಿ ಹೂಂದಿದೆ ಸಂಗೀತದ ಆಸ್ವಾದನೆಯಿಂದ ಎಂತಹ ರೋಗವಿದ್ದರೂ ಸಹ ಅದನ್ನು ಪರಿಹರಿಸುವ ಮಾಂತ್ರಿಕ ಶಕ್ತಿಯು ಸಂಗೀತಕ್ಕಿದೆ ಎಂದು ಶಾಸ್ತ್ರಿಯ ಹಾಗೂ ಸುಗಮ ಸಂಗೀತ ಕಲಾವಿಧ ರುದ್ರೇಶ ಬಡಿಗೇರ್ ಹೇಳಿದರು
ಅವರು ತಾಲೂಕಿನ ಬೆನಕನಕೂಂಡ ಗ್ರಾಮದ ಅಂಬೇಡ್ಕರ್ ಕಾಲೂನಿಯಲ್ಲಿ ದಸರಾ ಮಹೋತ್ಸವದ ಅಂಗವಾಗಿ ರಾಣೇಬೆನ್ನೂರೂ ಶ್ರೀ ಅನುಪಲ್ಲವಿ ಸಂಗೀತ ಕಲಾ ಸಂಸ್ಥೆ ಪ್ರಾಯೋಜಿಸಿದ ಸುಗಮ-ಜನಪದ ಹಾಗೂ ವೈವಿಧ್ಯಮಯ ಸಾಂಸ್ಕ್ರುತಿಕ ಕಲಾ ಪ್ರದರ್ಶನ ನೀಡಿ ಮಾತನಾಡಿದರು. ಇತಿಹಾಸದ ಕಲೆ ಮತ್ತು ಕಲಾವಿಧರು ಈ ದೇಶದ ಹಾಗೂ ಈ ಕರುನಾಡಿನ ಸಂಸ್ಕ್ರುತಿಯ ಹರಿಕಾರರು ಅಂದು ಇತಿಹಾಸ ಕಾಲದಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಗ್ರಾಮೀಣ ಜನರ ಬದುಕಿನ ಜೀವನಾಡಿಯಾಗಿದ್ದ ಜನಪದ ಕಲೆಗಳು ಪ್ರತಿಯೋಬ್ಬ ಮನುಷ್ಯನ ಮಾನಸಿಕ ಶಾಂತಿ ನೆಮ್ಮದಿಗೆ ಸಹಕಾರಿಯಾಗಿದ್ದವು ಎಂದು ವಿವರಿಸಿ ಮಾತನಾಡಿದ ರುದ್ರೇಶ ಅವರು ನಸಿಸುತ್ತಿರುವ ಕಲೆ ಕಲಾವಿಧರು ಉಳಿದು ಬೆಳೆಯಬೇಕಾದರೆ ಜನಾಶ್ರಯ ಇಂದಿನ ಅಗತ್ಯವಾಗಿದೆ ಎಂದರು.
ಗ್ರಾ.ಪಂ ಸದಸ್ಯ ಮಂಜವ್ವ, ಶಿ. ಅಸುಂಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸುರೇಶಪ್ಪ ಕೂಳೇರ, ಶಾಂತಪ್ಪ ಕಿವಡಣ್ಣನವರ, ಭರಮಪ್ಪ ದೂಡ್ಡಮನಿ, ಮಹದೇವಪ್ಪ ಕಿವಡಣ್ಣನವರ ಸೇರಿದಂತೆ ಮತ್ತಿತರ ಗಣ್ಯರು ಮುಖಂಡರು ಪಾಲ್ಗೂಂಡಿದ್ದರು. ಸುಮೀತ್ರಾ ಸಂಗಡಿಗರು ಪ್ರಾರ್ಥಿಸಿದರು, ಕರಬಸಪ್ಪ ಕಿವಡಣ್ಣನವರ ಸ್ವಾಗತಿಸಿದರು ಪ್ರವೀಣ್ ದೂಡ್ಡಮನಿ ನಿರೂಪಿಸಿ ವಂದಿಸಿದರು. ನಂತರ ನಡೆದ ಶ್ರೀ ಅನುಪಲ್ಲವಿ ಸಂಗೀತ ಸಂಸ್ಥೆಯ ಕಲಾ ತಂಡದ ಬಸವರಾಜ ಸಾವಕ್ಕನವರ, ಗಣೇಶ ಗುಡಗುಡಿ, ವಿರುಪಾಕ್ಷಪ್ಪ ಕಿವಡಣ್ಣನವರ, ಬಸವರಾಜ ಬಿಲ್ಲಳ್ಳಿ, ವೀಣಾ ಭೂಸಲೆ, ಕರಬಸಪ್ಪ ಮಾವಿನತೋಪ, ಕಲಾವಿಧರ ಕಾರ್ಯಕ್ರಮವು ಗ್ರಾಮೀಣ ನಾಗರೀಕರ ಗಮನ ಸೆಳೆದವು.