ಪೆಟ್ರೋಲ್ ಸುರಿದು ಯುವತಿ ಕೊಲೆ: ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯ
ಸಿಂದಗಿ21: ಬೆಂಗಳೂರಿನ ಪ್ರತಿಷ್ಟಿತ ಎಕ್ಸಂಚರ ಕಂಪನಿಯಲ್ಲಿ ಇಂಜೀನಿಯರಾದ ವಿಜಯಪೂರದ ದಾನೇಶ್ವರಿ ಅಶೋಕ ಶರ್ಮಾ ಇವಳ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಬದಾಮಿಯ ಶಿವಕುಮಾರ ಚಂದ್ರಶೇಖರ ಹಿರನಾಳ ಇತನನ್ನು ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾಲೂಕಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಮುಖಂಡರು ಮಾತನಾಡಿ ದಾನೇಶ್ವರಿ ಶರ್ಮಾ ಹಾಗೂ ಬದಾಮಿ ತಾಲೂಕಿನ ಶಿವಕುಮಾರ ಚಂದ್ರಶೇಖರ ಹಿರನಾಳ ಇವರು ವಿಜಯಪೂರದಲ್ಲಿ ಪದವಿ ಓದುವ ಸಂದರ್ಭದಲ್ಲಿ ಪ್ರೀತಿಸಿ ಮದುವೆಯಾಗುತ್ತೇನೆ ಎಂದು ಹೇಳಿ ಆತನ ಕುಟುಂಬಸ್ಥರ ಸಹಮತ ಮತ್ತು ಪರವಾನಿಗೆ ಪಡೆದುಕೊಂಡಿದ್ದೇನೆ, ಎಂದು ಸುಳ್ಳು ಹೇಳುತ್ತ, ಒಂದು ಅಮಾಯಕ ಹೆಣ್ಣು ಮಗಳ ಜೀವನದ ಬದುಕಿಗೆ ಚಲ್ಲಾಟ ಆಡಿ ನುಸುಳಿಕೊಳ್ಳವ ಸಂಚು ಹೂಡಿದ್ದಾನೆ. ಇದನ್ನರಿತ ದಾನೇಶ್ವರಿ ನನ್ನ ಕುಟುಂಬವನ್ನು ಬಿಟ್ಟು ನಿನ್ನನ್ನು ನಂಬಿ ನನ್ನ ಬದುಕು ಹಾಳು ಮಾಡಿಕೊಂಡಿದ್ದೇನೆ. ಕೂಡಲೇ ನನಗೆ ಮದುವೆಯಾಗಿ ಎಂದು ಒತ್ತಾಯ ಮಾಡಿದ್ದಾಳೆ. ನಾನು ಬೇರೆ ಜಾತಿಯವ ನೀನು ಬೇರೆ ಜಾತಿಯವಳು ನಾನು ನಿನಗೆ ಮದುವೆ ಆಗಲ್ಲ ನಿನ್ನ ದಾರಿ ನೀನು ನೋಡಿಕೊ ಎಂದು ಬೆದರಿಸಿ ಹೇಳಿದಂತಹ ಸಂದರ್ಭದಲ್ಲಿ ದಾನೇಶ್ವರಿ ನಾನು ನಿನ್ನನ್ನೆ ಕಾನೂನು ಪ್ರಕಾರ ಮದುವೆಯಾಗುತ್ತೇನೆ ಎಂದು ಅಳುತಾ ರಂಪಾಟ ಮಾಡಿದ್ದಾಳೆ. ಅದಕ್ಕೆ ಶಿವಕುಮಾರ ಕೊಲೆ ಮಾಡಲು ನಿರ್ಧರಿಸಿ ಸಹಚರರೊಂದಿಗೆ ಮಾ.15 ರಂದು ಆಯ್ತು ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿ ಸುಮಾರು ರಾತ್ರಿ 8.30 ಗಂಟೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವಳ ಮೈಮೇಲೆ ಪೆಟ್ರೋಲ ಸುರಿದು ಕೊಲೆ ಮಾಡಿ ಪರಾರಿ ಆಗಿದ್ದ ಆತನನ್ನು ಬಂಧಿಸುವಲ್ಲಿ ಇಲಾಖೆ ಯಶಸ್ವಿ ಕಂಡಿದ್ದು ಸ್ವಾಗತಾರ್ಹ ಎಂದರು.
ಈ ಕೊಲೆಗೆ ಮೂಲ ಕಾರಣಿ ಕರ್ತರಾದ ಆರೋಪಿಯ ತಂದೆ-ತಾಯಿ ಹಾಗೂ ಸಹೋದರ-ಸಹೋದರಿಯರು ಸೇರಿಕೊಂಡು ಈ ಕೊಲೆ ಮಾಡುವಂತೆ ಪ್ರಚೋದನೆ ನೀಡಿದ್ದಾರೆ. ಈ ಪ್ರಕರಣವು ರಾಜ್ಯ ಮಹಿಳಾ ಸಮುದಾಯ ತಲೆ ತಗ್ಗಿಸುವಂತಾಗಿದೆ. ಇದು ಮರ್ಯಾದೆ ಹತ್ಯೆಯಾಗಿದ್ದು, ಕೂಡಲೇ ಇಲಾಖೆಯವರು ಶೀಘ್ರದಲ್ಲಿ ಹೆಚ್ಚೆತ್ತುಕೊಂಡು ಕೊಲೆಗೀಡಾದ ದಾನೇಶ್ವರಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು, ಕೊಲೆಯ ಮುಖ್ಯ ಆರೋಪಿಗಳಾದ ಶಿವಕುಮಾರ ಮತ್ತು ಅವರ ತಂದೆ-ತಾಯಿ ಹಾಗೂ ಸಹೋದರ ಸೋದರಿಯರಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆ ಗೊಳಪಡಿಸಬೇಕು, ನೊಂದ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು, ನೊಂದ ಕುಟುಂಬಕ್ಕೆ ಸೂಕ್ತ ಬಂದೋಬಸ್ತ ನೀಡಬೇಕೆಂದು ಇಲ್ಲದಿದ್ದರೆ ಉಗ್ರವಾದ ಹೋರಾಟ ಕೈಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಂಚಾಲಕ ಸಿದ್ದು ಮೇಲಿನಮನಿ, ಜಿಲ್ಲಾ ಸಂಚಾಲಕ ರಾಜು ಯಂಟಮಾನ, ರಾಜು ಗುಬ್ಬೇವಾಡ, ಧರ್ಮರಾಜ ಯಂಟಮಾನ, ತಾಲೂಕು ಸಂಚಾಲಕ ಶ್ರೀಶೈಲ ಜಾಲವಾದಿ ಮಾತನಾಡಿದರು.
ಜಿಲ್ಲಾ ಸಂ.ಸಂಚಾಲಕರಾದ ರಾಘು ಗುಡಿಮನಿ, ಅಶೋಕ ಕಾದ್ರಿ, ಉಮೇಶ ರೂಗಿ, ಶರಣು ನಾಟಿಕಾರ ದೇವರಹಿಪ್ಪರಗಿ ಸಂಚಾಲಕ ದೌಲತ ತಳ್ಕೊಳ್ಳಿ, ಸಲೀಂ ನಡುವಿನಮನಿ, ತಾಳಿಕೋಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಮೈಬೂಬ ಢಬರಿ, ಜಿಲ್ಲಾ ಮಹಿಳಾ ಸಂಚಾಲಕಿ ಭಾರತಿ ಚಲವಾದಿ, ಶಶಿಕಲಾ ಮ್ಯಾಕೇರಿ, ರತ್ನಾ ಮಾಕೇರಿ, ಕವಿತಾ ಕಾಂಬಳೆ, ರೇಣುಕಾ ಚಲವಾದಿ ಸೇರಿದಂತೆ ಅನೇಕರಿದ್ದರು.