ಕಾಶ್ಮೀರ ಪಂಡಿತೋರ್ವರ ಹತ್ಯೆ ಖಂಡನೀಯ: ಸಿದ್ದನಗೌಡರ
ಬೈಲಹೊಂಗಲ 17: ಭಾರತದ ಮುಕೂಟ ಜಮ್ಮು ಮತ್ತು ಕಾಶ್ಮಿರದಲ್ಲಿ 370 ನೇ ವಿಧಿ ರದ್ದತಿಯ ನಂತರ ತಣ್ಣಗಾಗಿದ್ದ ಉಗ್ರಗಾಮಿಗಳ ಚಟುವಟಿಕೆ ಮಂಗಳವಾರ ಕಾಶ್ಮಿರದ ಆಪಲ್ ಅರ್ಚಾಟ್ ಶೋಪಿಯನ್ ಪ್ರದೇಶದಲ್ಲಿ ಭಯೋತ್ಮಾದಕರು ಕಾಶ್ಮೀರ ಪಂಡಿತೋರ್ವರನ್ನು ಹತ್ಯೆಗೈದಿರುವುದು ಖಂಡನೀಯ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ.ಎಸ್.ಸಿದ್ದನಗೌಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿ, ಚೊಟಿಪುರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕಾಶ್ಮಿರ ಪಂಡಿತ ಸಹೋದರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಓರ್ವ ಪ್ರಾಣಾಪಯದಿಂದ ಪಾರಾದರೆ ಇನ್ನೊರ್ವ ಪಂಡಿತ ಮೃತನಾಗಿರುವುದು ದುಖದ ಸಂಗತಿ ಎಂದರು.
ಇತ್ತಿಚೆಗೆ ಮೇಲಿಂದ ಮೇಲೆ ಮತ್ತೆ ಭಯೋತ್ಮಾದಕರು ಬಾಲ ಬಿಚ್ಚುತ್ತಿರುವದು ಕಂಡು ಬರುತ್ತಿದ್ದು, ಕೇಂದ್ರ ಸರ್ಕಾರ ಕಠಿಣವಾದ ಕ್ರಮ ಕೈಗೊಂಡು ಜಮ್ಮು ಮತ್ತು ಕಾಶ್ಮಿರದ ಮೂಲ ನಿವಾಸಿಗಳಾದ ಕಾಶ್ಮಿರ ಪಂಡಿತರ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕೆಂದು ಆಗ್ರಹಿಸಿದ್ದಾರೆ. ಉಗ್ರಗಾಮಿಗಳ ಮೂಲವನ್ನು ಪತ್ತೆ ಹಚ್ಚಿ ಅವರ ಹುಟ್ಟುಡಗಿಸಬೇಕು. ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯದಂತೆ ಇನ್ನಷ್ಟು ಜಾಗೃತಿ ವಹಿಸಬೇಕು. ಕಾಶ್ಮಿರ ಮೂಲವಾಸಿಗಳಿಗೆ ಧೈರ್ಯ ತುಂಬಿ ಕೇಂದ್ರ ಸರ್ಕಾರ ನೀಡುತ್ತಿರುವ ಸಹಕಾರ ಇನ್ನಷ್ಟು ಹೆಚ್ಚಿಸಬೇಕು ಎಂದರು.