ದೇವರಗುಡ್ಡ ಕ್ಷೇತ್ರಕ್ಕೆ ಮುನಿರತ್ನ ಭೇಟಿ
ರಾಣೇಬೆನ್ನೂರು 20: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಮಾಲತೇಶ ಕಲ್ಯಾಣಮಂಟಪದಲ್ಲಿ ರವಿವಾರ ದೇವಸ್ಥಾನದ ಪ್ರದಾನ ಅರ್ಚಕರಾದ ಸಂತೋಷಭಟ್ ಗುರೂಜಿ ಅವರ ನೇತ್ರತ್ವದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಮತ್ತು ಲೇಖನಿ ಸಾಮಗ್ರಿಗಳ ವಿತರಣಾ ಸಮಾರಂಭವು ನಡೆಯಿತು.
ಈ ಸಂಧರ್ಭದಲ್ಲಿ ಕ್ಷೇತ್ರಕ್ಕೆ ಧಾವಿಸಿ ದರ್ಶನಾರ್ಶಿವಾದ ಪಡೆದ ತೋಟಗಾರಿಕೆ, ಸಾಂಖಿಕ ಇಲಾಖೆ ಸಚಿವ ಎಸ್.ಮುನಿರತ್ನ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಸೇರಿದಂತೆ ಮತ್ತಿತರ ಗಣ್ಯರನ್ನು ಧರ್ಮದರ್ಶಿಗಳ ಪರವಾಗಿ ಭವ್ಯ ಸ್ವಾಗತ ನೀಡಿ ಅಭಿನಂದಿಸಿ, ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಗಡಿ ಆನಂದ ವನದ ಗುರುದತ್ತ ಚಕ್ರವರ್ತಿ ಶ್ರೀಗಳು, ಶಾಸಕ ಅರುಣಕುಮಾರ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾ.ಪಂ ಅಧ್ಯಕ್ಷ ಮಾಲತೇಶ ನಾಯರ, ಪವನ ಮಲ್ಲಾಡದ, ಉದಯಕುಮಾರ ವರಗಿರಿ, ಪವನ ದೇಸಾಯಿ, ನಿಂಗಪ್ಪ ಮುದ್ದಿ, ಎಮ್.ಎಮ್.ಸತಗಿ ಸೇರಿದಂತೆ ಮತ್ತಿತರೆ ಗಣ್ಯರು ಗ್ರಾ.ಪಂ ಸದಸ್ಯರು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರು ಮತ್ತು ಸಾವಿರಾರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.