ಶಿಗ್ಗಾವ್

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಶಿಗ್ಗಾವಿ,24 : ಶಿಗ್ಗಾವಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ 17 ಸದಸ್ಯರ ಬಲದೊಂದಿಗೆ ಅದ್ಯಕ್ಷರಾಗಿ ಬಿಜೆಪಿ ಪಕ್ಷದ ಸಿದ್ದಾರ್ಥಗೌಡ ಪಾಟೀಲ ಅವರು ಆಯ್ಕೆಯಾದರೆ ಉಪಾದ್ಯಕ್ಷರಾಗಿ ಬಿಜೆಪಿ ಪಕ್ಷದ ಶಾಂತಾಬಾಯಿ ಸುಬೇದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಒಟ್ಟು 23 ಸದಸ್ಯ ಬಲವಿರುವ ಶಿಗ್ಗಾವಿ ಪುರಸಭೆಯಲ್ಲಿ ಬಿಜೆಪಿ 9, ಕಾಂಗ್ರೇಸ್ 6, ಪಕ್ಷೇತ್ತರ 8 ಸದಸ್ಯರಿದ್ದಾರೆ, ಅದ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಬಿಜೆಪಿಯ ಸಿದ್ದಾರ್ಥಗೌಡ ಪಾಟೀಲ, ಕಾಂಗ್ರೇಸ್ ಪಕ್ಷದ ಕು. ವಸಂತಾ ಬಾಗೂರ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು. 

ಉಪಾದ್ಯಕ್ಷ ಸ್ಥಾನವು ಹಿಂದುಳಿದ (ಅ) ವರ್ಗಕ್ಕೆ ಮೀಲಾಗಿದ್ದ ಸ್ಥಾನಕ್ಕೆ ಬಿಜೆಪಿಯ ಶಾಂತಾಬಾಯಿ ಸುಬೇದಾರ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು, ಚುನಾವಣಾ ಪ್ರಕ್ರಿಯೇಯಲ್ಲಿ 17 ಸದಸ್ಯರು ಬಿಜೆಪಿಯ ಸಿದ್ದಾರ್ಥಗೌಡ ಪಾಟೀಲ ಅವರಿಗೆ ಕೈ ಎತ್ತುವ ಮೂಲಕ ಅದ್ಯಕ್ಷರನ್ನಾಗಿ ಆಯ್ಕೆ ಮಾಡಿದರು, ಕಾಂಗ್ರೇಸ್ ಅಭ್ಯರ್ಥಿ ಕು. ವಸಂತಾ ಬಾಗೂರ ಅವರು 6 ಸದಸ್ಯರ ಬೆಂಬಲವಷ್ಟೆ ಸಿಕ್ಕಿತು, ಪಕ್ಷೇತ್ತರರೆಲ್ಲರೂ ಸಂಸದ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿದರು, ಚುನಾವಣಾಧಿಕಾರಿಯಾಗಿ ತಹಸೀಲ್ದಾರ ಸಂತೋಷ ಹಿರೇಮಠ ಕಾರ್ಯನಿರ್ವಹಿಸಿದರು, ನಂತರ ಸದಸ್ಯರು ಹಾಗೂ ವಿವಿಧ ಮುಖಂಡರು ನೂತನ ಅದ್ಯಕ್ಷ, ಉಪಾದ್ಯಕ್ಷರನ್ನ ಸನ್ಮಾನಿಸಿ ಗೌರವಿಸಿದರು. 

ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ನನಗೆ ಸಿಕ್ಕಿರುವ ಅವಕಾಶದಲ್ಲಿ ಶಿಗ್ಗಾವಿ ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯ ಸೇರಿದಂತೆ ಕುಡಿಯುವ ನೀರು ಹಾಗೂ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಲಾಗುವುದು, ಜೊತೆಗೆ ನನ್ನ ಆಯ್ಕೆಗೆ ಸಹಕರಿಸಿದ ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಬೆಂಬಲಿಸಿದ ಸರ್ವ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. 


ಸುದ್ದಿ ಓದಿ