ಶಿಗ್ಗಾವ್

ನಿಮ್ಮ ಮನೆ ಬಾಗಿಲಿಗೆ ಪುರಸಭೆ ವಿನೂತನ ಪ್ರಾತ್ಯಕ್ಷಿಕೆ

ನಿಮ್ಮ ಮನೆ ಬಾಗಿಲಿಗೆ ಪುರಸಭೆ ವಿನೂತನ ಪ್ರಾತ್ಯಕ್ಷಿಕೆ

ಶಿಗ್ಗಾವಿ : ಅನೇಕ ಧೀಮಂತ ರಾಜಕಾರಣಿಗಳನ್ನು ಕಂಡ ರಾಜ್ಯ ಕರ್ನಾಟಕ ಅದರಲ್ಲಿ ದೂರದೃಷ್ಟಿಯನ್ನು ಹೊಂದಿದ ರಾಜಕಾರಣಿಗಳು ವಿರಳ ಅದರಲ್ಲಿ ಕೆಲವರು ಅಂದರೆ ದಿವಂಗತ ಡಿ ದೇವರಾಜ ಅರಸ, ರಾಮಕೃಷ್ಣ ಹೆಗಡೆ, ಎಸ್ ಬಂಗಾರ​‍್ಪ, ಬಿ.ಎಸ್‌.ಯಡಿಯೂರ​‍್ಪ ಇನ್ನುಳಿದ ರಾಜಕಾರಣಿಗಳು ಸೇರಿದಂತೆ ಶಿಗ್ಗಾವಿ ಸವಣೂರ ಕ್ಷೇತ್ರದ ಅಭಿವೃದ್ದಿ ಹರಿಕಾರ, ಉತ್ತರ ಕರ್ನಾಟಕದ ಧೀಮಂತ ನಾಯಕ ಹಾಗೂ 30 ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು. ಇವರೆಲ್ಲರಿಗಿಂತ ಇವರ ವ್ಯಕ್ತಿತ್ವವೇ ಬೇರೆ, ಇವರ ವಿಶೇಷತೆ ಇವರು ವೈಯ್ಯಕ್ತಿಕ ಕೆಲಸಗಳಿಗಿಂತ ಸಾರ್ವಜನಿಕ ಹಾಗೂ ಸಾಮಾಜಿಕ ಕೆಲಸ ಕಾರ್ಯಗಳಿಗೆ ವಿಶೇಷ ಆಸಕ್ತಿ ಹೊಂದಿದವರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಬ್ಬರು.  

ಮಹಾತ್ಮಾ ಗಾಂದೀಜಿಯವರ ರಾಮರಾಜ್ಯದ ಕನಸ್ಸು ನನಸ್ಸು ಮಾಡಲು ಹೊರಟಿರುವ ದೇಶದ ಹಾಗೂ ರಾಜ್ಯದ ಮೊದಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಂದರೆ ತಪ್ಪಾಗಲಾರದು ಏಕೆಂದರೆ ಆಜಾಧಿಕಾ ಅಮೃತ ಮಹೋತ್ಸವ ಗಣರಾಜೋತ್ಸವ ದಿನಾಚರಣೆ ನಿಮಿತ್ಯ ಮಾನ್ಯ ಮುಖ್ಯಮಂತ್ರಿಗಳ ಗ್ರಾಮ ಇನ್ ಓನ್ ಕಾರ್ಯಕ್ರಮವು ಸರಕಾರ ಮನೆ ಬಾಗಿಲಿಗೆ ಅಂದರೆ ಎಲ್ಲ ವಿಶೇಷ ಸೇವೆಗಾಗಿ ಅವರು ತಾಲೂಕ ಮಟ್ಟದ ಕಾರ್ಯಾಲಯಕ್ಕೆ ಬರಬೇಕಾಗಿತ್ತು ಆದರೆ ಮುಖ್ಯಮಂತ್ರಿಗಳ ದೂರದೃಷ್ಟಿಯಿಂದ ಗ್ರಾಮಸ್ಥರಿಗೆ ಮತ್ತು ರೈತಾಪಿ ವರ್ಗಕ್ಕೆ, ದಿನದಲಿತರಿಗೆ, ಕಡು ಬಡವರಿಗೆ, ವಿದವೆಯರಿಗೆ, ಅಂಗವಿಕಲರಿಗೆ, ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ, ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರ ಮನೆ ಭಾಗಿಲಿಗೆ ವಿಶೇಷ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಕಾರ್ಯರೂಪಕ್ಕೆ ತಂದ ಅವರ ಹೃದಯ ವೈಶಾಲತೆ ಮತ್ತು ಸಾಮಾನ್ಯ ಜನರ ಬಗ್ಗೆವಿರುವ ಕಳಕಳಿ ಕಾಳಜಿಯನ್ನು ಸೂಕ್ಷವಾಗಿ ಗಮನಿಸಬಹುದು. 

ಸರಕಾರ ಮನೆ ಭಾಗಿಲಿಗೆ ಯಶಸ್ವಿಯಾದ ಮಾದರಿಯಲ್ಲಿ  ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ 62ನೇ ಜನ್ಮ ದಿನದಂದು ಜನೇವರಿ 28 ರಂದು ಶಿಗ್ಗಾವಿ ಪುರಸಭೆ ವತಿಯಿಂದ “ನಿಮ್ಮ ಮನೆ ಬಾಗಿಲಿಗೆ ಪುರಸಭೆ” ಎಂಬ ವಿಶೇಷ ವಿನೂತನವಾದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಸಾರ್ವಜನಿಕ ಅನುಕೂಲಕ್ಕಾಗಿ ಪ್ರಾರಂಭಿಸಿದ ಕೀರ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಶಿಗ್ಗಾವಿ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯಸರು, ಮುಖ್ಯಾಧಿಕಾರಿಗಳು, ಸಿಬ್ಬಂದಿಗಳಿಗೆ ಸಲ್ಲುತ್ತದೆ ಇದು ಕರ್ನಾಟಕ ರಾಜ್ಯದಲ್ಲಿ ಇತಿಹಾಸದ ಪುಟದಲ್ಲಿ ಬರೆದಿಡುವ ಸುವರ್ಣದಿನ ಎನ್ನಬಹುದು. 

 ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರ ಮಾಡಲು ಗ್ರಾಮ, ನಗರದ ಅಭಿವೃದ್ಧಿಗೆ ಸಹಕರಿಸಲು ಮಾನ್ಯ ಮುಖ್ಯಮಂತ್ರಿಗಳ ಗ್ರಾಮ ಇನ್ ಓನ್ ಕಾರ್ಯಕ್ರಮವು ಸರಕಾರ ಮನೆ ಬಾಗಿಲಿಗೆ ಮಾದರಿಯಲ್ಲಿ ಪುರಸಭೆ “ನಿಮ್ಮ ಮನೆ ಬಾಗಿಲಿಗೆ ಪುರಸಭೆ” ಕಾರ್ಯಕ್ರಮದಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ಪುರಸಭೆ ಸಿಬ್ಬಂದಿ ವರ್ಗದವರು ಮತ್ತು ಸರ್ವ ಸದಸ್ಯರು ತಮ್ಮ ಸೇವೆಯನ್ನು ವಾರ್ಡ ಮಟ್ಟದಲ್ಲಿ ನೀಡಬೇಕೆಂಬ ಸದುದ್ದೇಶದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಇ-ಆಸ್ತಿ, ಜನನ-ಮರಣ, ಉದ್ಧಿಮೆ ಪರವಾನಿಗೆ, ಕುಂದುಕೊರತೆಗಳ ದೂರಗಳ ಸ್ವೀಕಾರ, ನೈರ್ಮಲ್ಯ, ಬೀದಿ ದೀಪ, ನೀರಿನ ವ್ಯವಸ್ಥೆ ಹಾಗೂ ಇತ್ಯಾದಿ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹಾರ ಮಾಡುವ ನಿಟ್ಟಿನಲ್ಲಿ ಕ್ರಮವಹಿಸುವ ಮುಖ್ಯ ಉದ್ದೇಶವಾಗಿದೆ. 

ಪುರಸಭೆಯ ವಿವಿಧ ಕಂದಾಯವನ್ನು ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಪಾವತಿಸಲು ಅನುಕೂಲ ಮಾಡಲಾಗಿದೆ. ಮನೆ ಕಂದಾಯ, ನೀರಿನ ಕಂದಾಯ, ಉದ್ಧಿಮೆ ಪರವಾನಿಗೆ ಇತ್ಯಾದಿಗಳನ್ನು ಸಂದಾಯ ಮಾಡಲು ವಿನಂತಿಸಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ನಗರದ ಅಭಿವೃದ್ಧಿಗೆ ಸಹಕರಿಸಲು ಮಾದರಿ ಹಾಗೂ ವಿಶೇಷ ಯೋಜನೆ ಆಗಿದೆ. 

“ನಿಮ್ಮ ಮನೆ ಬಾಗಿಲಿಗೆ ಪುರಸಭೆ” ಅನುಕೂಲತೆಗಳು : ಪುರಸಭೆಗೆ ಅಂಗವಿಕಲರು, ವಯೋವೃದ್ದರು, ವಿಧವೆಯರು, ರೈತಾಪಿ ವರ್ಗಕ್ಕೆ, ಕೂಲಿ ಕಾರ್ಮಿಕರು ಪದೇ, ಪದೇ ಅಲೆದಾಡುವುದು ತಪ್ಪುತ್ತದೆ, ಹಣ ಮತ್ತು ಸಮಯ ವ್ಯರ್ಥವಾಗುವುದನ್ನು ತಡೆಯಬಹುದು, ಸಿಬ್ಬಂದಿ ಹಾಗೂ ಸಾರ್ವಜನಿಕರ ಮದ್ಯೆ ಅನ್ಯೋನ್ಯತೆ ಬೆಳೆಯುತ್ತದೆ, ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುತ್ತವೆ, ಸಾರ್ವಜನಿಕರಿಗೆ ಸಿಬ್ಬಂದಿಗಳು ಕುಂಟ ನೆಪ ಹೇಳುವುದು ತಪ್ಪುತ್ತದೆ, ಆಯಾ ವಾರ್ಡಿನ ಜಲ್ವಂತ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಸೂಕ್ತ ವೇದಿಕೆಯಾಗಿದೆ, ಲಂಚಾವತಾರ ನಿಯಂತ್ರಣವಾಗುತ್ತದೆ, ಆಯಾ ವಾರ್ಡಿನ ಅಭಿವೃದ್ದಿ ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ಆಯಾ ವಾರ್ಡಿನ ಮುಖಂಡರ, ಸಾರ್ವಜನಿಕರ, ಮಹಿಳೆಯರ ಅನಿಸಿಕೆಗಳನ್ನು ಕ್ರೂಡೀಕರಿಸುವುದು ವಿಶೇಷವಾಗಿದೆ. 

“ನಿಮ್ಮ ಮನೆ ಬಾಗಿಲಿಗೆ ಪುರಸಭೆ” ಅವಲೋಕನ : ಪುರಸಭೆಯು ಪಟ್ಟಣದ 23 ವಾರ್ಡಗಳಲ್ಲಿ 2,3,4,5,8,9,10 ಆಯ್ದ ಕೆಲವೊಂದು ವಾರ್ಡಗಳಲ್ಲಿ ಈಗಾಗಲೇ ಇದರ ಪ್ರಾತ್ಯಕ್ಷಿಕೆ ಮುಗಿದ್ದಿದ್ದು ಬಹಳ ಪರಿಣಾಮಕಾರಿಯಾಗಿ ಇದರ ಯಶಸ್ಸು ಆಗಿದೆ ಎಂದು ಅಂಕಿ ಸಂಖೈಗಳ ಪ್ರಕಾರ ಹೇಳಬಹುದು. ಆಯಾ ವಾರ್ಡಿನ ಸಾರ್ವಜನಿಕರು ಇಲ್ಲಿಯೇ ನಿರಂತರವಾಗಿದ್ದರೇ ನಮಗೆಲ್ಲ ಅನುಕೂಲವಾಗುತ್ತದೆ ಹಾಗೂ 12 ತಿಂಗಳಲ್ಲಿ ತಿಂಗಳಿಗೆ ಎರಡೆರಡು ವಾರ್ಡನಲ್ಲಿ ಮಾಡಿದರೇ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.  

ಒಟ್ಟಾರೇ ಪಟ್ಟಣದ ಪುರಸಭೆಯ ಕಾರ್ಯ ಶ್ಲಾಘನೀಯವಾದದ್ದು ಆದರೇ ಇಲ್ಲಿ ಕೆಲವೊಂದು ಅನಾನುಕೂಲತೆಗಳೆಂದರೆ ಅಂಗನವಾಡಿ, ದೇವಸ್ಥಾನ, ಮದರಸಾ, ಸರಕಾರಿ ಶಾಲೆ, ಸಮುದಾಯ ಭವನ, ಸಂಘ ಸಂಸ್ಥೆಗಳ ಸಹಕಾರದಿಂದ ಕಟ್ಟಡದಲ್ಲಿ ಸೇವೆ ಸಲ್ಲಿಸುವುದು ಕಷ್ಟದಾಯಕ ಏಕೆಂದರೆ ಮಾನ್ಯ ಮುಖ್ಯಮಂತ್ರಿಗಳ ಗ್ರಾಮ ಇನ್ ಓನ್ ಕಾರ್ಯಕ್ರಮವು ಆಯಾ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ ಆದರೆ ಇಲ್ಲಿ ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತದೆ. ಆದರೂ ಸಹಿತ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಕಾರ್ಯಕ್ರಮ “ನಿಮ್ಮ ಮನೆ ಬಾಗಿಲಿಗೆ ಪುರಸಭೆ” ರಾಜ್ಯಕ್ಕೆ ಮಾದರಿಯಾಗಿದೆ ಅದರ ಶ್ರೇಯಸ್ಸು ಮುಖ್ಯಮಂತ್ರಿಗಳಿಗೆ ಮತ್ತು ಶಿಗ್ಗಾವಿ ಪುರಸಭೆಗೆ ಸಲ್ಲುತ್ತದೆ. 


ಸುದ್ದಿ ಓದಿ