ಶಿಗ್ಗಾವ್

ಪಟ್ಟಣದ ಪುರಸಭೆ ಬಜೆಟ್ ಮಂಡನೆ

ಪಟ್ಟಣದ ಪುರಸಭೆ ಬಜೆಟ್ ಮಂಡನೆ

ಲೋಕದರ್ಶನ ವರದಿ

ಶಿಗ್ಗಾವಿ 08: ಪಟ್ಟಣದ ಪುರಸಭೆಯ 2023-24 ನೇಸಾಲಿನ 16.55 ಲಕ್ಷಗಳ ಉಳಿತಾಯ ಬಜೆಟನ್ನು ಪುರಸಭೆಯ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಅವರು ಸೋಮವಾರ ಮಂಡಿಸಿದರು.

   ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಆಯವ್ಯಯ ಮಂಡಿಸಿದ ಅಧ್ಯಕ್ಷರು 2023-24ನೇ ಸಾಲಿನಲ್ಲಿ ರಾಜಸ್ವ ಖಾತೆಯಲ್ಲಿ 826.90ಲಕ್ಷ, ಬಂಡವಾಳ ಖಾತೆಯಲ್ಲಿ 1802, ಹಾಗೂ ಅಸಾಧಾರಣ ಖಾತೆಯಲ್ಲಿ 322.75ಲಕ್ಷಗಳ ಒಟ್ಟು2951.65 ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದ್ದು, ಅದೇ ರೀತಿ ರಾಜಸ್ವ ಖಾತೆಯಲ್ಲಿ 697.35 ಲಕ್ಷಗಳ ರಾಜಸ್ವ ವೆಚ್ಚವನ್ನು ನಿರೀಕ್ಷಿಸಿ, ಬಂಡವಾಳ ಕಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ 1915 ಲಕ್ಷ ರೂ.ಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿ, ಅಸಾಧಾರಣ ಖಾತೆಯಲ್ಲಿ 322.75 ಲಕ್ಷಗಳ ಅಸಾಧಾರಣ ವೆಚ್ಚವನ್ನು ನಿರೀಕ್ಷಿಸಿ, ಒಟ್ಟಾರೆಯಾಗಿ 2951.65 ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಿ, 2935.10 ಲಕ್ಷಗಳ ವೆಚ್ಚವನ್ನು ಅಂದಾಜಿಸಿ, 16.55 ಲಕ್ಷಗಳ ಉಳಿತಾಯ ಬಜೆಟ್ಟ್ ನ್ನು ನಿರೀಕ್ಷಿಸಲಾಗಿದೆ ಎಂದರು.

    ರಾಜ್ಯಸ್ವ ಆದಾಯ ಮತ್ತು ಬಂಡವಾಳ ಆದಾಯಗಳಲ್ಲಿ ಮುಖ್ಯವಾಗಿ ಸಕರ್ಾರದಿಂದ ಮುಕ್ತನಿಧಿ ಅನುದಾನ, 100ಲಕ್ಷ. 15ನೇ ಹಣಕಾಸು ಯೋಜನೆಯಲ್ಲಿ 250 ಲಕ್ಷ ಅನುದಾನ, ವಿಶೇಷ ಅನುದಾನ 1500.ಲಕ್ಷ, ವೇತನ ಅನುದಾನ 130 ಲಕ್ಷ, ವಿದ್ಯುಚ್ಛಕ್ತಿ ಅನುದಾನದಿಂದ 150 ಲಕ್ಷ, ಹಾಗೂ ನೀರು ಸರಬರಾಜು ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 20 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ಅದೇ ರೀತಿಯಾಗಿ ಆಸ್ತಿ ತೆರಿಗೆ ಆದಾಯದಿಂದ 100 ಲಕ್ಷ, ಅಭಿವೃದ್ಧಿ ಶುಲ್ಕದಿಂದ ಮತ್ತು ಕಟ್ಟಡ ಅನುಮತಿ ಶುಲ್ಕದಿಂದ 25.ಲಕ್ಷಗಳನ್ನು ನಿರೀಕ್ಷಿಸಿದೆ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ 18 ಲಕ್ಷ, ಅಂಗಡಿ ಲೈಸೆನ್ಸ್ ನಿಂದ 8.ಲಕ್ಷ, ಮಾರುಕಟ್ಟೆ ಶುಲ್ಕದಿಂದ 12.ಲಕ್ಷ, ಘನತಾಜ್ಯ ನಿರ್ವಹಣೆ ಸೇವಾ ಶುಲ್ಕದಿಂದ 10. ಲಕ್ಷ ಹಾಗೂ ನೀರು ಸರಬರಾಜು ನಳದ ಫೀ 60. ಲಕ್ಷ, ಉತಾರ ಖಾತೆ ಬದಲಾವಣೆ, ಭೋಜಾ ಫೀ ಎಂಬಿತ್ಯಾದಿ ಗಳಿಂದ 15.60. ಲಕ್ಷಗಳ ಆದಾಯವನ್ನು ನಿರೀಕ್ಷಿಸಲಾಗಿದ್ದು, ಇದರೊಂದಿಗೆ ಇನ್ನೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳಿಂದ ಆದಾಯ ತರುವ ಹಾಗೂ ಇನ್ನೂ ಹಲವಾರು ಆದಾಯ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಿಸುವ ಕಾರ್ಯವನ್ನು ತ್ವರಿತವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

      ಪುರಸಭೆಯ ಉಪಾಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ ಜಗದೀಶ ವೈ.ಕೆ, ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು 

ಸುದ್ದಿ ಓದಿ