ಮುಂದಗೋಡ

ಮುಂಡಗೋಡ ಪಿಎಸ್‌ಐಎನ್ ಡಿ. ಜಕ್ಕಣ್ಣವರ ವರ್ಗಾವಣೆ

ಮುಂಡಗೋಡ ಪಿಎಸ್‌ಐಎನ್  ಡಿ. ಜಕ್ಕಣ್ಣವರ ವರ್ಗಾವಣೆ

ಮುಂಡಗೋಡ 10: ಮುಂಡಗೋಡ ಪೊಲೀಸ ಠಾಣೆಯ ಕ್ರೈಮ್ ಪಿ.ಎಸ್‌.ಐ ಎನ್‌.ಡಿ.ಜಕ್ಕಣ್ಣವರ ಮುಂಡಗೋಡ ಠಾಣೆಯಿಂದ ವರ್ಗಾವಣೆಗೊಂಡಿದ್ದಾರೆ. ಕಳೆದ ಸುಮಾರು ಎರಡು ವರ್ಷಗಳಿಂದ  ಕ್ರೈಮ್ ಪಿ.ಎಸ್‌.ಐ ಹುದ್ದೆಯನ್ನು ಅತ್ಯಂತ ಕಾಯಕ್ಷಮತೆಯಿಂದ ನಿಬಾಯಿಸಿ ಇವರು, ಸಮಾಜ ಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನವಾಗಿದ್ದರು. ಸಮಾಜ ಘಾತುಕ ಕೆಲಸ ಮಾಡಿದವರನ್ನು ಕೆಲವೆ ದಿನಗಳಲ್ಲಿ ಬಂಧಿಸಿ ಅವರ ಹೆಡೆಮುರಿ ಕಟ್ಟಿದ ಅನೇಕ ನಿದರ್ಶನಗಳಿವೆ. ಚಾಲನಾ ಲೈಸನ್ಸ್‌, ಇನ್ಸೂರೆನ್ಸ್‌ ಇಲ್ಲದೆ ಹಾಗೂ ವೇಗಮಿತಿಯನ್ನು ದಾಟಿ ವಾಹನ ಚಾಲಾಯಿಸಿದವರಿಗೆ ಕಡಿವಾಣ ಹಾಕಿದ್ದರು. ಹೀಗೆಯೇ ತಮ್ಮ ಕಾಯಕ್ಷಮತೆ ಮತ್ತು ದಕ್ಷತೆ ಇಂದ, ಜನತೆಗೆ ಒಳ್ಳೆಯ ಶಿಸ್ತು, ಮತ್ತು ಪಾಠ  ಕಲಿಸುವ ಮಾರ್ಗದರ್ಶನರಾಗಿದ್ದಾರೆ. 


ಸುದ್ದಿ ಓದಿ