ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಭೆ; ಸಂಘಕ್ಕೆ 10.05 ಲಕ್ಷ ನಿವ್ಹಳ ಲಾಭ
ಕಾಗವಾಡ 23: ಆಡಳಿತ ಮಂಡಳಿ ಮತ್ತು ರೈತ ಸದಸ್ಯರ ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದಿಂದಾಗಿ ನಮ್ಮ ಸಂಘಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 10 ಲಕ್ಷ 5 ಸಾವಿರ 647 ರೂ. ನಿವ್ಹಳ ಲಾಭವಾಗಿದ್ದು, ಶೇ. 5 ರಷ್ಟು ಲಾಭಾಂಶ ವಿತರಿಸಲಾಗುವುದೆಂದು ಸಂಘದ ಅಧ್ಯಕ್ಷ ಸ್ವಪ್ನಿಲ(ಕಾಕಾ) ಪಾಟೀಲ ತಿಳಿಸಿದ್ದಾರೆ.
ಅವರು, ಮಂಗಳವಾರ ದಿ. 23 ರಂದು ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಭೆ; ಸಂಘದ 106ನೇ ವಾರ್ಷಿಕ ಸರ್ವ ಸಾಧಾರಣೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ನಾವು ಸಂಘದಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆಗಳನ್ನು ಮತ್ತು ಹೊಸ ಯೋಜನೆಗಳನ್ನು ಹಮ್ಮಿಕೊಂಡು, ಸಂಘದ ಅಭಿವೃದ್ಧಿಗೆ ಜೊತೆಗೆ ರೈತ ಸದಸ್ಯರಿಗೆ ಸರ್ಕಾರದಿಂದ ಸಿಗಬೇಕಾಗದ ಎಲ್ಲ ಸೌಲಭ್ಯಗಳನ್ನು ವದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ರೈತರ ಮತ್ತು ಸಂಘದ ಅಭಿವೃದ್ಧಿಗಾಗಿ ಪ್ರಾಮಾಣಿವಾಗಿ ಶ್ರಮಿಸುವುದಾಗಿ ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಪೂಜಾರಿ ವರದಿ ವಾಚನ ಮಾಡುತ್ತ, ಸಂಘವು ಒಟ್ಟು 2047 ಸದಸ್ಯರನ್ನು ಹೊಂದಿದ್ದು, 1.25 ಕೋಟಿ ಶೇರ ಬಂಡವಾಳ ಮತ್ತು 12.97 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಇನ್ನೂ 3.07 ಕೋಟಿ ಠೇವಣಿಗಳನ್ನು ಹೊಂದಿದ್ದು, 9.36 ಕೋಟಿ ಸಾಲ ವಿತರಿಸಲಾಗಿದೆ ಎಂದರು.
ಸಭೆಯಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗ್ರಾಮದ ಹಿರಿಯರು ತಮ್ಮ ಅನಿಸಿಕೆ ಹಂಚಿಕೊಂಡರು.
ಈ ವೇಳೆ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಬಿ.ಜೆ. ಪಾಟೀಲ, ಅಣ್ಣಾಸಾಬ ಕಠಾರೆ, ಬಾಳಗೌಡಾ ಪಾಟೀಲ, ಮಾಮಾಸಾಬ ಗಡೆನ್ನವರ, ಸೌರಭ ಪಾಟೀಲ, ಉಪಾಧ್ಯಕ್ಷ ಪದ್ಮಾಕರ ಕರವ, ನಿರ್ದೇಶಕರಾದ ಬಸಗೌಡಾ ಪಾಟೀಲ, ಶಾಂತಿನಾಥ ಮಾಲಗಾಂವೆ, ರಾವಸಾಬ ಚೌಗುಲಾ, ಅಪ್ಪಾಸಾಬ ಗುಮಟೆ, ಸುವರ್ಣಾ ಪಾಟೀಲ, ರುಪಾಲಿ ಪವಾರ, ಅನೀಲ ಬಜಂತ್ರಿ, ಲಕ್ಕಪ್ಪಾ ಕೋಳಿ, ಖಾಜಾಸಾಬ ಮುಲ್ಲಾ, ಭಾರತಿ ಚೌಗುಲೆ ಸೇರಿದಂತೆ ಸಿಬ್ಬಂದಿ ವರ್ಗದವರು, ಸದಸ್ಯರು ಉಪಸ್ಥಿತರಿದ್ದರು. ಪದ್ಮಾಕರ ಕರವ ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ಬಸವರಾಜ ಕೋರೆ ನಿರೂಪಿಸಿದರು. ಪವನ ಪಾಟೀಲ ವಂದಿಸಿದರು.