ಸೌಂದತ್ತಿ

ಮುಳಗುಂದ ಬಾಲ ಲೀಲಾ ಮಹಾಂತ ಶಿವಯೋಗಿಗಳ ದರ್ಶನ ಪ್ರವಚನ

ಮುಳಗುಂದ ಬಾಲ ಲೀಲಾ ಮಹಾಂತ ಶಿವಯೋಗಿಗಳ ದರ್ಶನ ಪ್ರವಚನ

ಸವದತ್ತಿ 16: ಪಟ್ಟಣದ ಗಾಂಧಿಚೌಕದಲ್ಲಿ ಗುರು ಕುಮಾರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ವಡಕಹೊಳಿ ನವಿಲು ತೀರ್ಥ ಗೊರವನಕೊಳ್ಳದ ಡಾ.ಅಭಿನವ ಕುಮಾರ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಐದು ದಿನಗಳ ಕಾಲ ಮುಳಗುಂದ ಬಾಲ ಲೀಲಾ ಮಹಾಂತ ಶಿವಯೋಗಿಗಳ ದರ್ಶನ ಕುರಿತು ಪ್ರವಚನ ಹಮ್ಮಿಕೊಳ್ಳಲಾಗಿತ್ತು. 

ಧಾರವಾಢ ಮುರಘಾಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ಪ್ರತಿನಿತ್ಯ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಪ್ರತಿನಿತ್ಯ ಸಂಜೆ 7 ಗಂಟೆಗೆ ಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಭಜನೆ, ಪ್ರವಚನ ಸೇರಿದಂತೆ ಮಹಾಪ್ರಸಾದವನ್ನು ಏರಿ​‍್ಡಸಲಾಗಿತ್ತು. ಪ್ರಭುನವರ ಓಣಿಯ ಸಕಲ ಸದ್ಭಕ್ತ ಮಂಡಳಿಯವರು ದಾಸೋಹದ ವ್ಯವಸ್ಥೆ ಮಾಡಿದ್ದರು. 

ಗುಲಗಂಜಿಮಠದ ಶ್ರೀ ಗುರುಪಾದ ಮಹಸ್ವಾಮೀಜಿ, ಸೊಲ್ಲಾಪುರ ಕೀರೀಟೇಶ್ವರಮಠದ ಸ್ವಾಮಿನಾಥ ಮಹಾಸ್ವಾಮೀಜಿ, ಅಡವಿಸಿದ್ದೇಶ್ವರ ಸ್ವಾಮೀಜಿ, ಅಜ್ಜಯ್ಯಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಡಾ.ಸಿ.ಬಿ.ನಾವದಗಿ, ಡಾ.ಅಭಿನಂದನ ಕಬ್ಬಿಣ, ಶಂಕರಗೌಡ ಪಾಟೀಲ, ಜಗದೀಶ ಹಳೆಮನಿ, ಬಿ.ಎನ್‌.ಪ್ರಭುನವರ ಹಾಗೂ ಭಕ್ತ ಸಮೂಹದವರು ಉಪಸ್ಥಿತರಿದ್ದರು. ವಿಜಯ ಹಿರೇಮಠ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ