ಭಾವಕೈತೆ ಸಾರುವ ಮೊಹರಂ ಅರ್ಥಪೂರ್ಣವಾಗಿ ಆಚರಣೆ
ಬೈಲಹೊಂಗಲ 09: ಹಿಂದೂ-ಮುಸ್ಲಿಂ ಭಾವಕೈತೆ ಸಾರುವ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹಿಂದೂ ಮುಸ್ಲಿಂ ಧರ್ಮಿಯರು ಅಲಾ ದೇವರಿಗೆ ಭಕ್ತಿಭಾವ ಸಮರ್ಿಸಿ, ಪೂಜೆ ಸಲ್ಲಿಸಿ ಸಕ್ಕರೆ, ಉತ್ತತ್ತಿ, ಬಾಳೆಹಣ್ಣು, ಊದು ವಿವಿಧ ತರಹದ ನೈವೇದ್ಯ ಅರ್ಿಸಿದರು. ‘ಹಸೆನ ಹುಸೆನಕಿ ದೋಸಕರಾದಿನ', ಫಕ್ಕೀರಸಾಬ ದೋಸಕರಾದಿನ' ಎನ್ನುತ್ತ ಭಕ್ತರು ಕೆಂಡದ ಕಿಚ್ಚಲ್ಲಿ ಹಾಯ್ದು, ಪ್ರದಕ್ಷಣೆ ಹಾಕಿದರು. ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಜನರು ಹಸೇನಿ, ಹುಸೇನಿ, ಲಾಲಸಾಬ ಮೊರೆ ಹೋಗಿದ್ದವರು ತಮ್ಮ ಕಾರ್ಯ ಯಶಸ್ವಿಯಾದ ಕೂಡಲೇ ದೇವರಿಗೆ ಕೃತಾರ್ಥರಾಗಲು ತಮ್ಮ ಮಕ್ಕಳನ್ನು ಫಕೀರ ಮಾಡಿ ಅಲಾಯಿ ಕೆಂಡದಲ್ಲಿನ ಬೆಂಕಿಯನ್ನು ಸುತ್ತು ಹಾಕಿ, ದಂಡ ಪ್ರಣಾಮ ಮೂಲಕ ಹರಕೆ ತೀರಿಸಿದರು.
ಈ ವಿಶೇಷಕ್ಕೆ ಬೈಲಹೊಂಗಲ ಪಟ್ಟಣವು ಕೋಮು ಸೌಹಾರ್ಧತೆಗೆ ಮತ್ತೊಮ್ಮೆ ಹೆಸರುವಾಸಿಯಾಯಿತು. ಮೊಹರಂ ಹಬ್ಬವು ಪ್ರವಾದಿ ಮೊಹಮ್ಮದ ಪೈಗಂಬರರ ಮೊಮ್ಮಕ್ಕಳಾದ ಹಸೇನ್ ಮತ್ತು ಹುಸೇನ್ ಇವರ ದೇಹಾಂತ್ಯವು ಯುಜಿದರ ಕೈಯಲ್ಲಿ ಆಗಿರುವ ಪರಿಣಾಮವಾಗಿ 2 ದಿವಸಗಳವರೆಗೆ ಉಪವಾಸ ಆಚರಣೆ ಮಾಡಿ ಕಡೆಯ ದಿನ 11 ಡೋಲಿಗಳು ಊರಿನ ಪ್ರಮುಖ ಬೀದಿಗಳಲ್ಲಿ ಹಾದು ಭಟ್ಟನ ಕೂಟದಲ್ಲಿ ಒಟ್ಟಿಗೆ ಸೇರಿದವು.
ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಭಾಂದವರು ತಮ್ಮ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿ ಹಾಗೂ ತೋರಣಗಳಿಂದ ಶ್ರಂಗರಿಸಿದ್ದರು. ಮೊಹರಂ ಹಬ್ಬದ ಕಡೆ ದಿನದ ಮೆರವಣಿಗೆಯಲ್ಲಿ ಹೆಜ್ಜೆಮೆಳ, ಸಂಗೀತ ಹಾಗೂ ಶಹನಾಯಿ ವಾದ್ಯಮೇಳದೊಂದಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ಹೊಳೆಗೆ ಕಳಿಸುವುದರ ಮೂಲಕ ಸಂಪ್ರದಾಯದಂತೆ ಮೊಹರಂ ವಿಧಿ ವಿಧಾನಗಳನ್ನು ಮುಕ್ತಾಯಗೊಳಿಸಿದರು.
ಮೊಹರಂ ಹಬ್ಬವನ್ನು ಶಾಂತತೆಯಿಂದ ಆಚರಿಸಲು ಡಿವೈಎಸಪಿ ಶಿವಾನಂದ ಕಟಗಿ, ಸಿಪಿಆಯ್ ಉಳವಪ್ಪ ಸಾತೇನಹಳ್ಳಿ ನೇತೃತ್ವದಲ್ಲಿ, ಪಿಎಸ್ಆಯ್ ಪ್ರವೀಣ ಕೊಟೆ ಹಾಗೂ ಸಿಬ್ಬಂದಿ ವರ್ಗದವರು ಅಚ್ಚುಕಟ್ಟಾಗಿ ಬಂದೊಬಸ್ತ ವ್ಯವಸ್ಥೆ ಮಾಡಿದ್ದರು.
ಮೆರವಣಿಗೆಯು ಸುಗಮವಾಗಿ ಸಾಗಲು ಹಿಂದೂ ಮುಸ್ಲಿಂ ಸಮಾಜದ ಮುಖಂಡರುಗಳಾದ ಪ್ರಕಾಶ ಪಾಗಾದ, ನಬಿಸಾಬ ಅಡಿಮನಿ, ಬಾಬುಸಾಬ ಅಡಿಮನಿ, ಶಪಿಕ ಅಡಿಮನಿ, ಅಶೋಕ್ ಪಾಗಾದ ಸಹಕರಿಸಿದರು.