ಸಂಭ್ರಮದಿಂದ ಮೊಹರಂ ಆಚರಣೆ
ಸವದತ್ತಿ 09: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಮಂಗಳವಾರದಂದು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೇರಿಕೊಂಡು ಭಾವೈಕ್ಯತೆಯೊಂದಿಗೆ, ಸಂಭ್ರಮದಿಂದ ಮೊಹರಂ ಆಚರಿಸಿದರು.
ಪಟ್ಟಣದ ನಾನಾ ಮಸೂತಿಗಳಲ್ಲಿ ಪ್ರತಿಷ್ಠಾಪಿಸಿದ ಪಾಂಜಾ ಮತ್ತು ಡೋಲಿಗಳು ಆನಿ ಅಗಸಿ ಮತ್ತು ಗಾಂಧಿ ಚೌಕದಲ್ಲಿ ಸೇರಿ ಅಲ್ಲಿ ಸಂಪ್ರದಾಯಕವಾಗಿ ಊದು ಹಾಕಿ ಒಂದಕ್ಕೊಂದು ಮಿಲಾಯಿಸಿ ಸಮಾಗಮಗೊಂಡವು.
ಪಟ್ಟಣದ ವಕ್ಕುಂದೇವರ ಓಣಿ, ಟಕ್ಕೇದ ಮಸೂತಿ, ಹಿರೇಮಸೂತಿ, ಹಗ್ಗದೇವರ ಓಣಿ, ಹಳ್ಳದೇವರ ಓಣಿ, ಕೆಂಚಲಾರಕೊಪ್ಪ, ಹುಡೇದ ಓಣಿ, ಹಣಮಗೇರಿ ಓಣಿ, ಅಲಾಲಕಿ ಓಣಿ, ಉಪ್ಪಾಸಗೇರಿ ಓಣಿಯಲ್ಲಿ ಪ್ರತಿಷ್ಠಾಪಿಸಿದಂತಹ ಪಾಂಜಾ ಮತ್ತು ಡೋಲಿಗಳು ಗಾಂಚೌಕದಲ್ಲಿ ಮಿಲಾಯಿಸಿದ ನಂತರ ನಗರದ ಪ್ರಮುಖ ಬೀದಿಗಳ ಮುಖಾಂತರ ಸಂಚರಿಸಿ ಸ್ವಸ್ಥಾನಕ್ಕೆ ಮರುಳಿದವು.
ಮೊಹರಂ ಹಬ್ಬದಲ್ಲಿ ಎಲ್ಲ ಧರ್ಮದವರು ಪಾಲ್ಗೊಳ್ಳುವದರೊಂದಿಗೆ ಭಾವೈಕ್ಯತೆಗೆ ಸಾಕ್ಷಿಯಾದರು. ಡಾಲ್ಬಿ ಸೌಂಡ್ನ ಗುಟುರಿನ ಶಬ್ದದೊಂದಿಗೆ ಯುವಕರು ಹಳೆಬಸ್ಟ್ಯಾಂಡಿನಿಂದ ಗಾಂಚೌಕದವರೆಗೆ ಕುಣಿದು ಕುಪ್ಪಳಿಸಿದರು.
ಊರಿನ ಗೌಡರಾದ ಶಂಕರಗೌಡ ಪಾಟೀಲ, ಲಕ್ಷ್ಮಣರಾವ್ ಕುಲಕರ್ಣಿ, ಕೆ.ಕೆ.ಪುಣೇದ, ಖಾನಸಾಬ ಹಲೀಮನವರ, ದಾದಾಬಾಯಿ ಸಣ್ಣಕ್ಕಿ, ರಾಮಣ್ಣ ಈಳಿಗೇರ, ಬಾಳಾರಾಮ ಜಾನ್ವೇಕರ, ಯಲ್ಲಪ್ಪ ಕಂಬಾರ, ಅಮೀರ ಗೋರಿನಾಯ್ಕ, ಹುಸೇನಸಾಬ ಮಾಲದಾರ, ಬಾಪುಸಾಬ ಪುಣೇದ, ಸುನೀಲ ಜೋರಾಪುರ, ಶ್ರೀಕಾಂತ ಜೋರಾಪುರ, ಕಾಶೆಪ್ಪ ಮಾಕನ್ನವರ, ಆನಂದ ಜಾನ್ವೇಕರ, ಬಸಲಿಂಗಪ್ಪ ಆಯಟ್ಟಿ, ವಾಸು ಗೋಂಧಳೆ, ಫಕ್ರುಸಾಬ ನದಾಫ, ನಿಂಗಪ್ಪ ಗೊರವನಕೊಳ್ಳ, ಯಲ್ಲಪ್ಪ ಮಡಿವಾಳರ ಹಾಗೂ ರೈತಾಪಿ ಜನರು ಮತ್ತು ನಗರದ ಜನತೆ ಪಾಲ್ಗೊಂಡಿದ್ದರು.