ಬೆಳಗಾವಿ

ಮುಗಳಖೋಡ: ಯಲ್ಲಾಲಿಂಗ ಮಹಾರಾಜರ 141ನೇ ಜಯಂತ್ಯೋತ್ಸವ ವಿಜೃಂಭಣೆಯಿಂದ ಆಚರಣೆ

ಮುಗಳಖೋಡ: ಯಲ್ಲಾಲಿಂಗ ಮಹಾರಾಜರ 141ನೇ ಜಯಂತ್ಯೋತ್ಸವ ವಿಜೃಂಭಣೆಯಿಂದ ಆಚರಣೆ

  ಮುಗಳಖೋಡ 13 :  ಸಮೀಪದ ಹಿಡಕಲ್ ಗ್ರಾಮದ ಡಾ. ಸಿದ್ಧೇಶ್ವರ ನಿಲಯದ ಆವರಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ರಾಯಬಾಗ ತಾಲೂಕು ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ರಾಯಬಾಗ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಭಕ್ತರ ಆರಾಧ್ಯ ಕಾಮಧೇನು ಸದ್ಗುರು ಶ್ರೀ ಯಲ್ಲಾಲಿಂಗ ಮಹಾರಾಜರ 141ನೇ ಜಯಂತ್ಯೋತ್ಸವ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.  

ಕಾರ್ಯಕ್ರಮದ ಅಂಗವಾಗಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ರಾಯಬಾಗ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಶರಣ ಜೀವಿಗಳಾದ ಕಲ್ಮೇಶ ಬಿ. ಸತ್ತಿ ಅವರು ಸದ್ಗುರು ಯಲ್ಲಾಲಿಂಗ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ರಾಯಬಾಗ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಾಹಿತಿ ಟಿ.ಎಸ್‌. ಒಂಟಗೂಡಿ ಭಾಗವಹಿಸಿದ್ದರು.

ಅವರು ಮಾತನಾಡಿ, “ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಕರಕಮಲಗಳಿಂದ ಜನಿಸಿದ ಯಲ್ಲಾಲಿಂಗರು ತಮ್ಮ ಆಶೀರ್ವಾದದ ಮೂಲಕ ಭಕ್ತರ ಅಜ್ಞಾನ ಅಂಧಕಾರವನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ಮೂಡಿಸಿದ ಮಹಾನ್ ಸಂತರು. ಏಳು ಕೋಟಿ ಶಿವನಾಮ ಜಪದ ಮೂಲಕ ಸ್ಮಶಾನವನ್ನು ಸುಕ್ಷೇತ್ರವನ್ನಾಗಿ ಪರಿವರ್ತಿಸಿದ ಸತ್ಕೀರ್ತಿಗೆ ಪಾತ್ರರಾದ ಸದ್ಗುರು ಯಲ್ಲಾಲಿಂಗ ಮಹಾರಾಜರು ಭಕ್ತರಿಗೆ ಭಕ್ತಿಯ ದಿವ್ಯ ಸಂದೇಶ ಸಾರಿದರು” ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ರೈತ ಅಶೋಕ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಒಂಟಗೂಡಿ ಕುಟುಂಬದ ಅಮಿತ್ ಪೂಜಾರಿ, ಚಿಬ್ಬವ್ವ ಒಂಟಗೂಡಿ, ಯಮನವ್ವ ಪೂಜಾರಿ, ಗೌರವ್ವ ಒಂಟಗೂಡಿ, ಮೀನಾಕ್ಷಿ ಒಂಟಗೂಡಿ, ಇಂದ್ರವ್ವ ಒಂಟಗೂಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ರಾಮು ಒಂಟಗೂಡಿ ಸ್ವಾಗತಿಸಿ ನಿರೂಪಿಸಿದರು. ಲಕ್ಷ್ಮಿ ಪೂಜಾರಿ ವಂದಿಸಿದರು. 


ಸುದ್ದಿ ಓದಿ