ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಕಾರ್ಯ ಮುದೇನೂರ ಗ್ರಾಮ ಓನ್ ನಾಗರಿಕರ ಸೇವಾ ಕೇಂದ್ರ
ಕುಷ್ಟಗಿ 05: ತಾಲೂಕು, ಹೋಬಳಿ ಮಟ್ಟದ ಕಚೇರಿಗಳಿಗೆ ಭೇಟಿ ನೀಡಲು, ತಗಲುವ ಸಂಚಾರ ವೆಚ್ಚವಿಲ್ಲ ಸಮಯದ ಉಳಿತಾಯ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಕಾರ್ಯ ಮುದೇನೂರ ಗ್ರಾಮ ಓನ್ ನಾಗರಿಕರ ಸೇವಾ ಕೇಂದ್ರ ಮಾಡುತ್ತಿದೆ.
ಹೌದು ತಾಲೂಕಿನ ಮುದೇನೂರ ಗ್ರಾಮದ ಗ್ರಾಮ ಓನ್ ನಾಗರಿಕರ ಸೇವಾ ಕೇಂದ್ರ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉತ್ತಮ ಸೇವೆ ನೀಡುವ ಜೊತೆಗೆ ಬಡವರ ಪಾಲಿನ ಸಂಜೀವಿನಿಯಾಗಿ ಹೊರ ಹೊಮ್ಮಿದೆ.
ಮುದೇನೂರ ಗ್ರಾಮದಲ್ಲಿ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವತ್ತಿರುವ ಗ್ರಾಮ ಓನ್ ನಾಗರಿಕರ ಸೇವಾ ಕೇಂದ್ರದ ಮುಖ್ಯಸ್ಥೆ ಆಶಾ ವಿರೇಶ ಉಳಾಗಡ್ಡಿ ಇವರ ನೇತೃತ್ವದಲ್ಲಿ ಕಳೆದ 4 ತಿಂಗಳಿಂದ ಈ ಕೇಂದ್ರದಲ್ಲಿ ಸರಕಾರದ ಅನೇಕ ಬಗೆಯ ಯೋಜನೆಗಳನ್ನು ಅಲ್ಲಿನ ನಾಗರಿಕರಿಗೆ ಸರ್ಮಪಕವಾಗಿ ದೊರಕಿಸುವಲ್ಲಿ ಯಶಸ್ವಿಯಾಗಿದೆ.
ರೈತರಿಗೆ ಸಹಕಾರಿಯಾಗುವು ಬೆಳೆವಿಮೆ, ಹಕ್ಕು ಮತ್ತು ಹಿಡುವಳಿ ಬೆಳೆಗಳ ದಾಖಲೆಯ ಪಹಣೆ, ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣ ಪತ್ರ, ಪಶು ಸಂಗೋಪನೆ ಇಲಾಖೆ ಸೇವೆಗಳು ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ತ್ವರಿತಗತಿಯಲ್ಲಿ ಒದಗಿಸುತ್ತಿದೆ.
ಅಂಗವಿಕಲ ವೇತನ, ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ ಯೋಜನೆಗಳಲ್ಲಿ ವೇತನ ಪಡೆಯಲು ಅರ್ಜಿ ತುಂಬುಲಾಗುತ್ತದೆ.
ಹಿರಿಯ ನಾಗರಿಕರ ಮತ್ತು ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಲು ಗ್ರಾಮ ಓನ್ ನಾಗರಿಕರ ಸೇವಾ ಕೇಂದ್ರದಲ್ಲಿ ಅರ್ಜಿ ತುಂಬುಲಾಗುತ್ತದೆ.
ನಾಗರಿಕರು, ಹಿರಿಯ ನಾಗರಿಕರು, ಮಹಿಳೆಯರು, ವಿಶೇಷ ಚೇತನರು ತಮ್ಮ ಗ್ರಾಮದಲ್ಲಿಯೇ ಸರ್ಕಾರದ ನಾಗರಿಕ ಸೇವೆಗಳನ್ನು ಪಡೆಯಬಹುದು. ತಾಲೂಕು, ಹೋಬಳಿ ಮಟ್ಟದ ಕಚೇರಿಗಳಿಗೆ ಭೇಟಿ ನೀಡಲು ತಗಲುವ ಸಂಚಾರ ವೆಚ್ಚವಿಲ್ಲ ಸಮಯದ ಉಳಿತಾಯ ಹಾಗೂ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಕಾರಣ ಮುದೇನೂರ ಹಾಗೂ ಸುತ್ತ ಮುತ್ತಲಿನ ನಾಗರಿಕರು ಗ್ರಾಮ ಓನ್ ನಾಗರಿಕರ ಸೇವಾ ಕೇಂದ್ರದ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮುಖ್ಯಸ್ಥೆ ಆಶಾ ವಿರೇಶ ಉಳಾಗಡ್ಡಿ ತಿಳಿಸಿದರು.