ಬೈಲಹೊಂಗಲ

ಶಾಲಾ ಮಕ್ಕಳಿಗಾಗಿ ಪ್ರೇರಣಾ, ವ್ಯಕ್ತಿತ್ವ ವಿಕಸನ ಶಿಬಿರ

ಶಾಲಾ ಮಕ್ಕಳಿಗಾಗಿ ಪ್ರೇರಣಾ, ವ್ಯಕ್ತಿತ್ವ ವಿಕಸನ ಶಿಬಿರ

ಬೈಲಹೊಂಗಲ 22:  ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ನಮ್ಮ ನ್ಯೂನ್ಯತೆಗಳನ್ನು ನಮ್ಮ ಸಾಧನೆಗೆ ಮೆಟ್ಟಿಲು ಮಾಡಿಕೊಂಡಾಗ ಮಾತ್ರ ಸಾಧ್ಯ ಎಂದು ಮಾನವ ಕಂಪ್ಯೂಟರ್ ಎಂದೇ ಪ್ರಖ್ಯಾತ ಗಣಿತ ತಜ್ಞ ಬಸವರಾಜ ಉಮರಾಣಿ ಹೇಳಿದರು.ಅವರು ನಯಾನಗರ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳಿಗಾಗಿ ಪ್ರೇರಣಾ ಮತ್ತು ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿ, ನಮಗೆ ಮಾದರಿ ವ್ಯಕ್ತಿಗಳು ಯಾರೆಂದರೆ ನಮ್ಮ ತಂದೆ ತಾಯಿಗಳು, ಗುರುಗಳು ಹಾಗೂ ನಮ್ಮದೆ ಆದ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳನ್ನ ಇಟ್ಟುಕೊಳ್ಳಬೇಕೆ ಹೊರತು ಬೇರೆ ವ್ಯಕ್ತಿಗಳನ್ನಲ್ಲಾ, ಆ ಭಗವಂತ ಬಹಳ ಬುದ್ದಿವಂತ ನಿಮ್ಮೆಲ್ಲರನ್ನ ನೋಡುವ ಅವಕಾಶವನ್ನು ನನಗೆ ಕೊಟ್ಟಿಲ್ಲವಾದರೂ, ನಿಮ್ಮ ಜೊತೆ ಸಂವಾದ ಮಾಡುವ ಅವಕಾಶ ನೀಡಿದ್ದಾನೆ. ನನ್ನ ಈ ಸಾಧನೆಗೆ ಅಂದತ್ವ ಕಾರಣ ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂದರು.  ಮಕ್ಕಳಿಗೆ ಗಣಿತ ಲೆಕ್ಕಗಳನ್ನು ಸರಳವಾಗಿ ಬಿಡಿಸುವ ಕಲೆ, ನೆನಪಿನ ಶಕ್ತಿಯನ್ನು ವೃದ್ದಿಸುವ ಬಗೆ, ಹುಟ್ಟಿದ ದಿನ ಹೇಳಿದರೆ ವಾರ ಹೇಳುವ ಬಗೆಯನ್ನು ಹಾಗೂ ಮನಸ್ಸು ಕೇಂದ್ರೀಕರಣ ಮಾಡುವುದು ಹೇಗೆ ಎಂದು ತಿಳಿಸಿಕೊಟ್ಟರು. ಮುಖ್ಯೋಪಾಧ್ಯಯ  ನಾಗೇಶ ಮಾಳನ್ನವರ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ, ಬಿ.ಆರ್.ಪಿ ಎ.ಬಿ ಅಂಗಡಿ, ಸಿ.ಆರ್.ಪಿಗಳಾದ ಎಸ್.ಎಸ್ ಪಾಟೀಲ, ಸಿದ್ದು ನೇಸರಗಿ ಎಸ್ಡಿಎಂಸಿ ಸದಸ್ಯರಾದ ನಿಂಗಪ್ಪ ಅಳಗೋಡಿ, ಮೌನೇಶ ಬಡಿಗೇರ, ಈರಣ್ಣ ಮಾಳಗಿ, ವಿದ್ಯಾಶ್ರೀ ಕಲಾಲ, ಜಿ.ವಾಯ್ ಬಾಗಲೆ, ಎರಡೂ ಶಾಲೆಗಳ ಗುರು ಬಳಗ, ಮಕ್ಕಳು ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಎಮ್.ಬಿ ಬೈಲಪ್ಪನವರ ಕಾರ್ಯಕ್ರಮ  ನಿರೂಪಿಸಿ, ವಂದಿಸಿದರು. ಬೈಲಹೊಂಗಲ ತಾಲೂಕಿನ ನಯಾನಗರ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳಿಗಾಗಿ ಪ್ರೇರಣಾ ಮತ್ತು ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾನವ ಕಂಪ್ಯೂಟರ್ ಎಂದು ಖ್ಯಾತಿ ಪಡೆದ ಬಸವರಾಜ ಉಮರಾಣಿ ಮಾತನಾಡಿದರು.

ಸುದ್ದಿ ಓದಿ