ತಾಯಿ ಮತ್ತು ಮಗ ಕಾಣೆ; ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ),ಅ.9: ಕಾನಾಹೊಸಹಳ್ಳಿ ಗ್ರಾಮದ ನಿವಾಸಿ 28 ವರ್ಷದ ಕಾವೇರಿ ಹಾಗೂ 8 ವರ್ಷದ ಸ್ವರಾಭಿಷೇಕ ಎಂಬ ತಾಯಿ ಮತ್ತು ಮಗು ಕಾಣೆಯಾಗಿರುವ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೆಚ್. ದುರುಗಪ್ಪ ಅವರು ತಿಳಿಸಿದ್ದಾರೆ.
ಚಹರೆ: 4.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ. ಕನ್ನಡ ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಚೂಡಿದಾರ ಧರಿಸಿರುತ್ತಾಳೆ.
ಕಾಣೆಯಾದ ತಾಯಿ ಮತ್ತು ಮಗುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಹಳ್ಳಿಯ ಪಿಎಸ್‌ಐ, ಹೊಸಹಳ್ಳಿಯ ಸಿಪಿಐ, ಕೂಡ್ಲಿಗಿಯ ಡಿಎಸ್‌ಪಿ ಹಾಗೂ ವಿಜಯನಗರ ಎಸ್ಪಿ ಅವರಿಗೆ ಅಥವಾ ಮೊ.9480805784 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.