ಬಳ್ಳಾರಿ

ತಾಯಿ, ಮಗಳು ಕಾಣೆ

ತಾಯಿ, ಮಗಳು ಕಾಣೆ

ಬಳ್ಳಾರಿ: ಕಂಪ್ಲಿ ಪಟ್ಟಣದ ನಿವಾಸಿಯಾದ ದೀಪಾ ಎನ್ನುವ 28 ವರ್ಷದ ತಾಯಿ ಹಾಗೂ ಗೌತಮಿ ಎನ್ನುವ 05 ವರ್ಷದ ಮಗಳು ಕಾಣೆಯಾಗಿರುವ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಯಿ ದೀಪಾ ಚಹರೆ ಗುರುತು: ಎತ್ತರ 4.9 ಅಡಿ, ದುಂಡು ಮುಖ, ಎಣ್ಣೆಗೆಂಪು ಹೊಂದಿರುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಬಣ್ಣದ ಚೂಡಿದಾರ್, ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ವೇಲು ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. 

ಮಗಳು ಗೌತಮಿ ಚಹರೆ ಗುರುತು: ಎತ್ತರ 3 ಅಡಿ, ದುಂಡು ಮುಖ, ಎಣ್ಣೆಗೆಂಪು ಹಾಗೂ ಹಣೆಯ ಮೇಲೆ ಹುಟ್ಟು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ  ಪಿಂಕ್ ಬಣ್ಣದ ಟಾಪ್, ಜೀನ್ಸ್‌ ಪ್ಯಾಂಟ್ ಧರಿಸಿರುತ್ತಾಳೆ.  

 ಕಾಣೆಯಾಗಿರುವ ತಾಯಿ ಮತ್ತು ಮಗಳ ಇಬ್ಬರ ಬಗ್ಗೆ ಮಾಹಿತಿ ದೊರೆತಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿ.ಐ ಮೊ.8277977722, 9480803038, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಬಹುದು. 

ಸುದ್ದಿ ಓದಿ