ತಾಯಿ,ಮಗಳು ಕಾಣೆ: ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ) 04: ಹೊಸಪೇಟೆ ಹಂಪಿ ರಸ್ತೆಯ 6 ನೇ ವಾರ್ಡ್ನ ಬನ್ನಿ ಕಾಳಮ್ಮ ಗುಡಿ ಹಿಂದುಗಡೆಯ ಸುಣ್ಣದಭಟ್ಟಿ ಏರಿಯಾದ ನಿವಾಸಿಯಾದ 26 ವರ್ಷದ ಸುಜಾತ ಮತ್ತು 4 ವರ್ಷದ ಮಗಳು ಲಕ್ಷ್ಮೀ ಎಂಬ ತಾಯಿ ಮತ್ತು ಮಗಳು ಸೆ.22 ರಂದು ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ತಾಯಿಯ ಚಹರೆ ಗುರುತು: 5 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, ಬಲಗೈ ಮೇಲೆ ಇಂಗ್ಲೀಷ್ನಲ್ಲಿ ವಿ ಎಂದು ಹಚ್ಚೆ ಗುರುತು ಇರುತ್ತದೆ. ಕೆಂಪು ಬಣ್ಣದ ಚೂಡಿದಾರ, ಬ್ಲಾಕ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾತನಾಡುತ್ತಾಳೆ.
ಕಾಣೆಯಾದ ಮಗುವಿನ ಚಹರೆ ಗುರುತು: 2.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು. ಬಿಳಿ ಬಣ್ಣದ ಫ್ರಾಕ್ ಧರಿಸಿರುತ್ತಾಳೆ.
ಕಾಣೆಯಾದ ತಾಯಿ ಮತ್ತು ಮಗಳ ಮಾಹಿತಿ ದೊರೆತಲ್ಲಿ ಹೊಸಪೇಟೆ ಕಂಟ್ರೋಲ್ ರೂಂ ಸಂಖ್ಯೆ: 94808057700, ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂಖ್ಯೆ: 08394-228233, ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಅವರ ಮೊ.ಸಂಖ್ಯೆ: 9480805746 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.