ಟಿಎಪಿಸಿಎಮ್ಎಸ್ನಿಂದ ರೈತರಿಗೆ ಹೆಚ್ಚಿನ ಸೌಲಭ್ಯ: ಯಲಿಗಾರ
ಸವದತ್ತಿ 21: ರೈತರಿಗೆ ಅನಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಾ ಒಕ್ಕುಲತನ ಹುಟ್ಟುವಳಿ ಮರಾಟ ಸಹಕಾರಿ ಸಂಘವು ಕಾರ್ಯನಿರ್ವಹಿಸುತ್ತಿದ್ದು, ಬರುವಂತ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವ ಮೂಲಕ ತಾಲೂಕಿನ ರೈತರಿಗೆ ಹೆಚ್ಚಿನ ಸೌಲಭ್ಯತೆಗಳನ್ನು ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕ ರವೀಂದ್ರ ಯಲಿಗಾರ ಹೇಳಿದರು.
ಸ್ಥಳೀಯ ಟಿಎಪಿಸಿಎಮ್ಎಸ್ ಸೊಸೈಟಿಯಲ್ಲಿ ಹಮ್ಮಿಕೊಂಡ 66ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಆರು ದಶಕಗಳಿಂದ ರೈತರೊಂದಿಗೆ ಅನ್ಯೋನ್ಯತೆಯನ್ನು ಹೊಂದಿರುವ ಟಿಎಪಿಸಿಎಮ್ಎಸ್ ಸೊಸೈಟಿಯ ಹೊಸ ಯೋಜನೆಗಳಿಗೆ ಆಡಳಿತ ಮಂಡಳಿಯ ಎಲ್ಲ ನಿದರ್ೇಶಕರು ಮತ್ತು ಸದಸ್ಯರು ಸಹಕಾರ ಬಹು ಮುಖ್ಯವಾಗಿದೆ ಎಂದರು.
ಸಂಘದ ಅಭಿವೃದ್ದಿ ಕುರಿತು ನಿರ್ದೇಶಕ ಪ್ರಕಾಶ ಮೂಗಬಸವ ಹಾಗೂ ರೈತರಿಗೆ ಸೂಕ್ತ ಅನುಕೂಲತೆಗಳನ್ನು ಒದಗಿಸಬೇಕೆಂದು ಬಸವರಾಜ ಕಾರದಗಿ ಮಾತನಾಡಿದರು.
ಸಭೆಯಲ್ಲಿ ವ್ಯವಸ್ಥಾಪಕ ಪ್ರಕಾಶ ಯಲಿಗಾರ ವಾರ್ಷಿಕ ವರದಿ, ಸನ್ 2021-22 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ,ಆರ್ಥಿಕ ತ:ಖ್ತೆ, ಆಡಳಿತ ಮಂಡಳಿಯವರು ಸನ್ 2022-23 ನೇ ಸಾಲಿಗಾಗಿ ಕೈಕೊಳ್ಳುವ ಕಾರ್ಯ ಚಟುವಟಿಕೆಗಳ ಕುರಿತು ಸನ್ 2022-23 ನೇ ಸಾಲಿನ ಅಂದಾಜು ಪತ್ರಿಕೆಯನ್ನು ಹಾಗೂ ಸಂಘವು ಸನ್ 2021-22 ನೇ ಸಾಲಿನಲ್ಲಿ ಗಳಿಸಿದ ಲಾಭವನ್ನು ವಿಂಗಡಣೆ ಮಾಡಿದ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿದರ್ೆಶಕರಾಗಿ ಅವಿರೋಧವಾಗಿ ಆಯ್ಕೆಯಾದ ರವೀಂದ್ರ ಯಲಿಗಾರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆಡಳಿತ ಮಂಡಳಿ ನಿರ್ದೇಶಕ ರು ಮತ್ತು ಸದಸ್ಯರು ಉಪಸ್ಥಿತರಿದ್ದರು