ಮಾಂಟೊಸ್ಸೊರಿ ಶಾಲೆಯ ಪಾಲಕ, ಶಿಕ್ಷಕರು, ಆಡಳಿತ ಮಂಡಳಿ ಸಭೆ
ಸಿಂದಗಿ 16; ಮಗು ನಿಸರ್ಗ ಹಾಗೂ ಪರಿಸರ ನಡುವೆ ಶಿಕ್ಷಣ ಪಡೆಯುವುದರ ಜೊತೆಗೆ ಮಗು ಅಕ್ಷರ ಜ್ಞಾನ, ಪದಗಳ ಸ್ಪಷ್ಟ ಉಚ್ಚಾರಣಿ ಅಕ್ಷರ ಗ್ರಹಿಸುವ ವಿಧಾನ, ಪದಗಳು ಸರಿಯಾಗಿ ಬಳಕೆ ಮಾಡುವುದು, ಚಿತ್ರಗಳ ಮೂಲಕ ಗ್ರಹಿಸಿಕೊಳ್ಳುವುದು, ತರಗತಿಯಲ್ಲಿ ಸಂತೋಷದಾಯಕ ವಾತಾವರಣ ನಿರ್ಮಾಣದ ಜೊತೆಗೆ ಬೋಧನೆ ತೊಡುಗುವುದು ಮಾಂಟೊಸ್ಸೊರಿಯ ಶಿಕ್ಷಣದ ಮೂಲ ಧ್ಯೆಯವಾಗಿದೆ ಎಂದು ಮಾಂಟೊಸ್ಸೊರಿ ಸಂಪನ್ಮೂಲ ವ್ಯಕ್ತಿಗಳಾದ ನಂದನಿಯವರು ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಭೀಮಾ ಯುನಿವರ್ಸಲ್ ಮಾಂಟೊಸ್ಸೊರಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಸಭೆಯಲ್ಲಿ ಇಲ್ಲಿ ಮಗುವಿಗೆ ಕೆವಲ ಬೋಧನೆಗೆ ಅಷ್ಟೆ ಸೀಮಿತವಾಗದೆ ಆಟಿಕೆಗಳ ಮೂಲಕ ಚಿತ್ರಪಟಗಳ, ಅಂದವಾದ ಬರವಣಿಗೆ, ಹಾಡುಗಳ ಮುಖಾಂತರ ಜ್ಞಾನ ಪಡೆಯುವುದು. ಇನ್ನೂ ಶಾಲೆಯ ಗೊಡೆಗಳ ಮೇಲೆ ವಿಸ್ಮಯ ಹಾಗೂ ಮನಮೊಹಕವಾದ ನಿಸರ್ಗ ಚಿತ್ರಗಳ ಸಹಾಯದಿಂದ ಕಲಿಕೆಯ ಪೂರಕವಾದ ಜ್ಞಾನ ಸಂಪತ್ತು ನಿಡುವ ಮಾಂಟೊಸ್ಸರಿ ಬೋದನಾ ಶೈಲಿ ಮುಖಾಂತರ ಕಲಿಕೆಯಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ವಿಠ್ಠಲ ಕೋಳ್ಳೂರ ಮಾತನಾಡಿ, ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಇಂತಹ ಒಂದು ಮಾಂಟೊಸ್ಸೊರಿ ಪದ್ಧತಿಯಲ್ಲಿ ಶಿಕ್ಷಣವನ್ನು ಪಡೆಯಬೇಕು ಮಗು ಸ್ವಾವಲಂಬಿಯಾಗಿ ಸಮಾಜದಲ್ಲಿ ಒಬ್ಬ ಉತ್ತಮ ರೀತಿಯ ಶಿಕ್ಷಣವನ್ನು ಮಗು ಪಡೆದು ಉತ್ತಮ ನಾಗರಿಕನಾಗಿ ಹೊರಹೊಮ್ಮಲಿ ಎಂಬ ಕಾರಣದಿಂದ ಈ ಮಾದರಿ ಶಿಕ್ಷಣವನ್ನು ಪಡೆಯಲಿ ಎಂಬ ಆಸೆ ನನ್ನದಾಗಿದೆ ಎಂದು ಹೇಳಿದರು.
ಮಾಂಟೊಸ್ಸೊರಿ ಪದ್ಧತಿ ಕಲುಸುವಿಕೆಯ ಮಹತ್ವ ಕುರಿತು ಪ್ರಾಂಶುಪಾಲೆ ಶಾಲಿನಿ ಮಾತನಾಡಿದರು.
ಮಾಂಟೊಸ್ಸೊರಿ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು ತರಗತಿಯ ವೇಳಾಪಟ್ಟಿ ಶಿಸ್ತಿನ ಕುರಿತು ಹೇಳಿದರು.
ಸಭೆಯಲ್ಲಿ ಶಾಲೆ ಮಕ್ಕಳು ಪಾಲಕರು, ಶಾಲಾ ಸಿಬ್ಬಂದಿ ವರ್ಗದವರು, ನಿರ್ದೇಶಕರಾದ ದತ್ತು ಮಾವೂರ, ಪ್ರಶಾಂತ ಕಮತಗಿಯವರು ಸಭೆಯಲ್ಲಿ ಭಾಗವಹಿಸಿದ್ದರು