ರಾಷ್ಟ್ರೀಯ

ಪ್ರಧಾನಿಯಿಂದ ಕೋಸಿ ರೈಲು ಮಹಾ ಸೇತುವೆ ಉದ್ಘಾಟನೆ

ಪ್ರಧಾನಿಯಿಂದ ಕೋಸಿ ರೈಲು ಮಹಾ ಸೇತುವೆ ಉದ್ಘಾಟನೆ

ನವದೆಹಲಿ,  ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ವೇದಿಕೆಯ   ಮೂಲಕ ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆ ಉದ್ಘಾಟನೆ ಮಾಡಲಿದ್ದಾರೆ. 

ಕೋಸಿ ರೈಲು ಸೇತುವೆ ಜೊತೆಗೆ ಬಿಹಾರದ ಪ್ರಯಾಣಿಕರ ಅನುಕೂಲಕ್ಕಾಗಿ 12 ರೈಲು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಮುಖವಾಗಿ ಕಿಯುಲ್ ನದಿಯ ಹೊಸ ರೈಲ್ವೆ ಸೇತುವೆ, ಎರಡು ಹೊಸ ರೈಲ್ವೆ ಮಾರ್ಗಗಳು, 5 ವಿದ್ಯುದ್ದೀಕರಣ ಯೋಜನೆಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ.

2003-04ರಲ್ಲಿ ಕೇಂದ್ರದಿಂದ ಕೋಸಿ ಮೆಗಾ ಸೇತುವೆ ಯೋಜನೆ ಮಂಜೂರು ಆಗಿತ್ತು. 1.9 ಕಿಲೋ ಮೀಟರ್ ಉದ್ದದ ಈ ಸೇತುವೆಗಾಗಿ 516 ಕೋಟಿ ರೂ.  ವೆಚ್ಚಮಾಡಲಾಗಿದೆ.  

ಸುದ್ದಿ ಓದಿ