ರಾಷ್ಟ್ರೀಯ

ಇಂದು ವಾರಣಾಸಿಗೆ ಪ್ರಧಾನಿ ಮೋದಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ಇಂದು ವಾರಣಾಸಿಗೆ  ಪ್ರಧಾನಿ ಮೋದಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ನವದೆಹಲಿ, ನವೆಂಬರ್ 30: ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ.  ಪ್ರಧಾನಿ ಮೋದಿ ಸಂಚರಿಸಲಿರುವ   ವಿವಿಧ ಪ್ರದೇಶಗಳಲ್ಲಿ ಭದ್ರತಾ ಅಧಿಕಾರಿಗಳು  ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.  ಈ  ಭೇಟಿಯ ವೇಳೆ ವಾರಣಾಸಿ-ಪ್ರಯಾಗರಾಜ್  ನಡುವಣ  ಆರು ಪಥದ ಹೆದ್ದಾರಿಯನ್ನು  ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

 73 ಕಿ.ಮೀ ಉದ್ದದ ಈ  ಹೆದ್ದಾರಿಯನ್ನು  2,447 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಿಂದ ಪ್ರಯಾಗರಾಜ್ -  ವಾರಣಾಸಿ ನಡುವಣ ಪ್ರಯಾಣ  ಅವಧಿ  ಒಂದು ಗಂಟೆ ತಗ್ಗಲಿದೆ.  ಇಂದು ಕಾರ್ತಿಕ ಹುಣ್ಣಿಮೆ ದಿನವಾಗಿದ್ದು,  ಮೋದಿ ಇಂದು ವಾರಣಾಸಿಯಲ್ಲಿ ದೇವ್ ದೀಪಾವಳಿ  ಕಾರ್ಯಕ್ರಮಕ್ಕೂ  ಚಾಲನೆ ನೀಡಲಿದ್ದಾರೆ.

ಕಾರ್ತಿಕ ಪೂರ್ಣಮಿಯ ದಿನ ದೇವ್  ದೀಪಾವಳಿ ಹಬ್ಬ ಆಚರಿಸುತ್ತಾರೆ.   ಸೋಮವಾರ ಗಂಗಾ ನದಿಯ ಎರಡೂ ಬದಿಗಳಲ್ಲಿ 11 ಲಕ್ಷ ದೀಪಗಳನ್ನು ಬೆಳಗಿಸಲಿದ್ದಾರೆ.   ಮೊದಲ ದೀಪವನ್ನು  ಪ್ರಧಾನಿ ಮೋದಿ ಬೆಳಗಿಸಿ ಸಮಾರಂಭಕ್ಕೆ  ಚಾಲನೆ  ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಶಿ ವಿಶ್ವನಾಥ ಟೆಂಪಲ್  ಕಾರಿಡಾರ್ ಯೋಜನೆಯನ್ನು ಸಮೀಕ್ಷಿಸಲಿದ್ದಾರೆ.   ಮತ್ತೊಂದುಕಡೆ ಕೆಲ  ದಿನಗಳ ಹಿಂದೆ  ಪ್ರಧಾನಿ ಮೋದಿ   ಚಾಲನೆ ನೀಡಿದ್ದ  ಸಾರನಾಥ ಪುರಾತತ್ವ ಸ್ಥಳದಲ್ಲಿ  ಬೆಳಕು ಹಾಗೂ  ಧ್ವನಿ ವ್ಯವಸ್ಥೆಯನ್ನೂ  ಪ್ರಧಾನಿ ಖುದ್ದು ವೀಕ್ಷಿಸಲಿದ್ದಾರೆ.

ಸುದ್ದಿ ಓದಿ