ರಾಷ್ಟ್ರೀಯ

ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ

ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ  ಚಾಲನೆ

ನವದೆಹಲಿ, ಸೆಪ್ಟೆಂಬರ್  29: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಉತ್ತರ ಖಂಡದಲ್ಲಿ   ಮಂಗಳವಾರ   ನಮಾಮಿ ಗಂಗೆ ಯೋಜನೆ ಅಡಿ 6  ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಅವರು ಗಂಗಾ ನದಿಯ ಸಂಸ್ಕೃತಿ, ಜೀವ ವೈವಿಧ್ಯತೆ ಮತ್ತು ಪುನರುಜ್ಜೀವನ ಚಟುವಟಿಕೆಯ ಕುರಿತಾದ ಸಂಗ್ರಹಾಲಯ 'ಗಂಗಾ ಅವಲೋಕನ' ಲೋಕಾರ್ಪಣೆ ಮಾಡಲಿದ್ದಾರೆ. 

ಈ ಯೋಜನೆಯಡಿ 68ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದೆ. 

ಹರಿದ್ವಾರದ ಸಾರೈನಲ್ಲಿನ 18 ಎಂಎಲ್ಡಿ ಎಸ್ಟಿಪಿ ನಿರ್ಮಾಣ ಯೋಜನೆಗಳಿಗೂ  ಚಾಲನೆ ಸಿಗಲಿದೆ ಎಂದೂ   ಪ್ರಧಾನಿ ಕಚೇರಿ ಹೇಳಿದೆ. 


ಸುದ್ದಿ ಓದಿ