ಪೋಖ್ರಾನ್ ಪರಮಾಣು ಪರೀಕ್ಷೆಗಳನ್ನು ವಿರೋಧಿಸಿದ್ದ ಮೋದಿ, ಅಮಿತ್ ಶಾ.....!
ನವದೆಹಲಿ, ನವೆಂಬರ್ 23: 1998ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಭಾರತ ನಡೆಸಿದ್ದ
ಪರಮಾಣು ಪರೀಕ್ಷೆಯನ್ನು ಇಡೀ ದೇಶ ಸ್ವಾಗತಿಸಿತ್ತು. ಆ ಪರೀಕ್ಷೆಗಳಿಂದ ಭಾರತ ಪರಮಾಣು ಹೊಂದಿರುವ ದೇಶಗಳ ಸಾಲಿಗೆ ಸೇರ್ಪಡೆಗೊಂಡಿತ್ತು. ಆದರೆ, ಹಾಲಿ ಪ್ರಧಾನಿ ನರೇಂದ್ರ ಮೋದಿ , ಗೃಹ ವ್ಯವಹಾರಗಳ
ಸಚಿವ ಅಮಿತ್ ಶಾ ಮಾತ್ರ ಈ ಪರೀಕ್ಷೆಗಳನ್ನು
ತೀವ್ರವಾಗಿ ವಿರೋಧಿಸಿದ್ದರಂತೆ. ರಾಜಕೀಯ ವಿಜ್ಞಾನಿ
ವಿನಯ್ ಸೀತಾಪತಿ ಬರೆದಿರುವ “ಜಗಲ್ಬಂದಿ : ದಿ ಬಿಜೆಪಿ ಬಿಫೋರ್ ಮೋದಿ” ಎಂಬ ಪುಸ್ತಕ ಈ ವಿವರ ಬಹಿರಂಗಪಡಿಸಿದೆ.
ಆ ಸಮಯದಲ್ಲಿ ಗುಜರಾತ್‌ನಲ್ಲಿ ಸಾಮಾನ್ಯ ಬಿಜೆಪಿ ಶಾಸಕರಾಗಿದ್ದ 33 ವರ್ಷದ ಅಮಿತ್ ಶಾ ಆಗಿನ ಪ್ರಧಾನಿ ವಾಜಪೇಯಿ ಅವರ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ವಿನಯ್ ಸೀತಾಪತಿ ಪುಸ್ತಕದಲ್ಲಿ ಹೇಳಿದ್ದಾರೆ.
ಪರಮಾಣು ಪರೀಕ್ಷೆಗಳ ಬಗ್ಗೆ ತೀವ್ರ ಅಸಮಧಾನ ಹೊಂದಿದ್ದ ಅಮಿತ್ ಶಾ, ಈ ಸಂಬಂಧ ಪ್ರಧಾನಿ ವಾಜಪೇಯಿಗೆ ಪತ್ರಕೂಡ ಬರೆದಿದ್ದರು ಎಂದು ಹೇಳಲಾಗಿದೆ. ಗೌರವಾನ್ವಿತ ವಾಜಪೇಯಿಜೀ ‘ನೀವು ಪ್ರಚಾರಕ್ಕಾಗಿ ನಡೆಸಿದ ಈ ಕಾರ್ಯ ಪಾಕ್ ಆಕ್ರಮಿತ ಕಾಶ್ಮೀರವನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡಿದೆ ಎಂದು ಅಮಿತ್ ಶಾ ಪತ್ರದಲ್ಲಿ ಹೇಳಿದ್ದರಂತೆ... ತಕ್ಷಣವೇ ಅಮಿತ್ ಷಾ ಅವರನ್ನು, ವಾಜಪೇಯಿ ದೆಹಲಿಗೆ ಕರೆಸಿಕೊಂಡು ಈ ಪತ್ರದ ಬಗ್ಗೆ ಮಾತನಾಡಿದ್ದಾರೆ ಎಂದು ವಿನಯ್ ಸೀತಾಪತಿ ಪುಸ್ತಕದಲ್ಲಿ ಬರೆದಿದ್ದಾರೆ. ಆಗ ನರೇಂದ್ರ ಮೋದಿ ಕೂಡ ಪರಮಾಣು ಪರೀಕ್ಷೆಗಳನ್ನು ವಿರೋಧಿಸಿದ್ದರು ಎಂದು ತಿಳಿಸಿದ್ದಾರೆ.