ರಾಷ್ಟ್ರೀಯ

ಬಾಬರಿ ಪ್ರಕರಣದ ತೀರ್ಪು : ಮುಸ್ಲಿಂ ಸಮುದಾಯದಿಂದ ಮಿಶ್ರ ಪ್ರತಿಕ್ರಿಯೆ

ಬಾಬರಿ ಪ್ರಕರಣದ ತೀರ್ಪು : ಮುಸ್ಲಿಂ ಸಮುದಾಯದಿಂದ ಮಿಶ್ರ ಪ್ರತಿಕ್ರಿಯೆ

ಲಖನೌ, ಸೆಪ್ಟೆಂಬರ್ 30 :ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ಮುಸ್ಲಿಂ ಸಮುದಾಯದಿಂದ ಮಿಶ್ರ ಪ್ರತಿಕ್ರಿಯ ವ್ಯಕ್ತವಾಗಿದೆ.ಕೆಲವರು ಇದನ್ನು ಸ್ವಾಗತಿಸಿದ್ದರೆ, ಕೆಲವರು ತೀರ್ಪನ್ನು ಟೀಕಿಸಿದ್ದಾರೆ. 

ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿಯ ಸದಸ್ಯ ಜಫರ್ಯಾಬ್ ಜಿಲಾನಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದು, ಆರೋಪಿಗಳನ್ನು ಖುಲಾಸೆಗೊಳಿಸುವುದರಲ್ಲಿ 'ದೊಡ್ಡ ಕಾನೂನು ದೋಷವಿದೆ' ಎಂದು ಹೇಳಿದ್ದಾರೆ. ಹಾಗೂ ಹೈಕೋರ್ಟ್‌ನಲ್ಲಿ ಸಮುದಾಯವು ಈ ನಿರ್ಧಾರವನ್ನು ಪ್ರಶ್ನಿಸುತ್ತದೆ ಎಂದು ಅವರು ತಿಳಿಸಿದ್ದಾರೆ. 

ಸುದ್ದಿಗಾರರೊಡನೆ ಮಾತನಾಡಿದ ಜಿಲಾನಿ, "ಇದು ತಪ್ಪಾದ ತೀರ್ಪು ಏಕೆಂದರೆ ಸಾಕ್ಷ್ಯಗಳಿಗೆ ವಿರುದ್ಧವಾಗಿದೆ ಮತ್ತು ಕಾನೂನಿಗೆ ವಿರುದ್ಧವಾಗಿದೆ. ನಾವು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ" ಎಂದಿದ್ದಾರೆ. 

ಆದರೆ, ಬಾಬರಿ ಪ್ರಕರಣದ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ 32 ಆರೋಪಿಗಳನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ಸ್ವಾಗತಿಸಿದ್ದಾರೆ.

“ಇದು ಈಗ ಮುಗಿದಿರುವುದು ಒಳ್ಳೆಯದು. ಎಲ್ಲರೂ ಶಾಂತಿಯಿಂದ ಬದುಕೋಣ. ಮತ್ತೆ ಹೊಸ ತೊಂದರೆಗಳು ಎದುರಾಗದಿರಲಿ.  ಅಯೋಧ್ಯೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಶಾಂತಿಯಿಂದ ವಾಸಿಸುತ್ತಿದ್ದಾರೆ ”ಎಂದು ಅವರು ಅಯೋಧ್ಯೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸುದ್ದಿ ಓದಿ