ಯುವತಿ ಕಾಣೆ : ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ ಜಿಲ್ಲೆ)23: ವಿಜಯನಗರ ಜಿಲ್ಲೆಯ ಹಂಪಿ ಪ್ರವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 21 ವರ್ಷದ ಕಿಮ್ ಗಿಸಿಂಕೆ ಎಂಬ ಯುವತಿ ಜ.15 ರಂದು ಕಾಣೆಯಾಗಿರುವ ಕುರಿತು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆ ಗುರುತು : ವಯಸ್ಸು ಸುಮಾರು 21ವರ್ಷ, ಲಂಬಾಣಿ ಜನಾಂಗ, 5.6 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧರಣ ಮೈಕಟ್ಟು ಹೊಂದಿದ್ದು, ಕನ್ನಡ, ಇಂಗ್ಲೀಷ್ ಮತ್ತು ಲಂಬಾಣಿ, ಹಿಂದಿ ಹಾಗೂ ತೆಲಗು ಭಾಷೆಯನ್ನು ಮಾತನಾಡುತ್ತಾಳೆ, ಎಡಮೊಣಕಾಲಿನ ಮೇಲೆ ಹಳೆಯ ಸುಟ್ಟ ಗಾಯದ ಗುರುತು ಇದೆ, ಮನೆಯಿಂದ ಹೋಗುವಾಗ ತಿಳಿ ಹಸಿರು ಬಣ್ಣದ ಟೀ ುಷರ್ಟ್ ,ಕಪ್ಪು ಬಣ್ಣದ ಬರ್ಮುಡಾ ಧರಿಸಿರುತ್ತಾಳೆ.
ಈ ಮೆಲ್ಕಂಡ ಚಹರೆಯುಳ್ಳ ಯುವತಿಯ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಹಂಪಿ ಪ್ರವಾಸಿ ಪೊಲೀಸ್ ಠಾಣೆ : 08394-241530, ಹಂಪಿ ಸಿಪಿಐ 9480805732, ಪಿಎಸ್ಐ 9480805758, ಡಿಎಸ್ಪಿ 08394-224204-ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.